ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ಕೊರತೆ

ವರದಿ : ಗಣೇಶ್ ಹೆಗಡೆ

ಬೆಂಗಳೂರು : ಕೋವಿಡ್ ಕಾರಣಕ್ಕೆ ಶಿಕ್ಷಕರನ್ನು ದೂರವಿಟ್ಟಿದ್ದ ಖಾಸಗಿ ಶಾಲೆಗಳನ್ನೀಗ ಶಿಕ್ಷಕರು ದೂರ ವಿಟ್ಟಿದ್ದಾರೆ. ಪರಿಣಾಮ ಶಾಲೆಯಲ್ಲಿ ಕಲಿಸುವವರೇ ಇಲ್ಲದಂತಾಗಿದ್ದಾರೆ.

ಅಷ್ಟೇ ಅಲ್ಲದೇ ಕೋವಿಡ್ ವೇಳೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕ ರನ್ನು ನಡೆಸಿಕೊಂಡ ರೀತಿಗೂ ಶಿಕ್ಷಕರು ಬೇಸತ್ತಿದ್ದಾರೆ. 2022-23 ನೇ ಸಾಲಿನಲ್ಲಿ ಖಾಸಗಿ ಶಾಲೆಗಳಿಗೆ ಶೇ.40% ಶಿಕ್ಷಕರ ಕೊರತೆ ಉಂಟಾಗಿದೆ ಎಂದು ಅಂದಾಜಿ ಸಲಾಗಿದೆ.

ಕರೋನಾ ಸಂದರ್ಭದಲ್ಲಿ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ನೀಡಿದ್ದರು. ಆ ವೇಳೆ ಕಡಿಮೆ ವೇತನವನ್ನು ಶಿಕ್ಷಕರಿಗೆ ನೀಡಲಾಗಿತ್ತು. ಇನ್ನೂ ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಿಗೆ ವೇತನ ನೀಡದೆ ವಜಾ ಮಾಡಲಾಗಿತ್ತು. ಇದರಿಂದ ಬೇಸತ್ತು ಬೇರೆ ಉದ್ಯೋಗದತ್ತ ಶಿಕ್ಷಕರು ಮುಖ ಮಾಡಿದ್ದಾರೆ. ಶಿಕ್ಷಕರ ಕೊರತೆ ಇದೀಗ ಆಡಳಿತ ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ.

ಇಂಗ್ಲೀಷ್,ಸಮಾಜ ವಿಜ್ಞಾನ, ವಿಜ್ಞಾನ, ಗಣಿತ ವಿಷಯಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದೆ. ಈ ಸಂಬಂಧ ಹೊರ ರಾಜ್ಯ ಡಿ.ಇಡಿ.ಹಾಗೂ ಬಿ.ಇಡಿ ಮುಗಿಸಿದ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಸಂಸ್ಥೆಗಳು ಮುಂದಾಗಿವೆ.

Edited By : Shivu K
Kshetra Samachara

Kshetra Samachara

25/04/2022 07:09 pm

Cinque Terre

2.91 K

Cinque Terre

0

ಸಂಬಂಧಿತ ಸುದ್ದಿ