ಆನೇಕಲ್ :ಶಿಕ್ಷಣ ಪಡೆದು ಕೆಲಸ ಮಾಡಲು ಹೋಗುವ ಸಂದರ್ಭದಲ್ಲಿ ಹಾಗೂ ಇಂಡಸ್ಟ್ರಿಗಳಲ್ಲಿ ಅನುಭವಿಸುತ್ತಿರುವ ಕಷ್ಟಗಳನ್ನು ನಿರ್ವಹಣೆ ಮಾಡಲು ಹಾಗೂ ಅಂತರವನ್ನು ಕಡಿಮೆಗೊಳಿಸಲು HR CONCLEVE ಸ್ಥಾಪನೆ ಮಾಡಲಾಗಿದೆ ಎಂದು ಪ್ರತಿಷ್ಠಿತ ಅಲಯನ್ಸ್ ಯುನಿವರ್ಸಿಟಿ ಪ್ರೋ ಚಾನ್ಸಲರ್ ಆಭಯ ಛಬ್ಬಿ ತಿಳಿಸಿದರು..
ಆನೇಕಲ್ ತಾಲೂಕಿನ ಕಾವಲ ಹೊಸಹಳ್ಳಿ ಬಳಿ ಇರುವ ಅಲಯನ್ಸ್ ಯುನಿವರ್ಸಿಟಿ ಸಭಾಂಗಣದಲ್ಲಿ HR CONCLEVE ಹಾಗೂ 25ನೇ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಇತ್ತೀಚಿಗೆ ಶಿಕ್ಷಣ ಪಡೆದ ಕಾಲೇಜಿನ ವಿದ್ಯಾರ್ಥಿಗಳು ಕೆಲಸ ಮಾಡುವ ಸಂದರ್ಭದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಪ್ರತಿಷ್ಠಿತ ಉದ್ಯಮಿಗಳಲ್ಲಿ ಆಗುತ್ತಿರುವ ತೊಂದರೆಗಳನ್ನು ಕಡಿಮೆ ಮಾಡುವ ಸಲುವಾಗಿ ಈ HR CONCLEVE ಒಂದು ಸ್ಥಾಪನೆ ಮಾಡಲಾಗಿದೆ ಈ ಕಂಪನಿಯಲ್ಲಿ 250 ಹೆಚ್ಚು ಕಂಪನಿಗಳು ಭಾರತದ ಕೆಲಸ ನಿರ್ವಹಿಸುತ್ತಿದ್ದು ಇದು ಕಾರ್ಪೋರೇಟ್ ಕಂಪನಿಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ ಟೆಸ್ಲಾ ಹಾಗೂ ಫ್ಲಿಪ್ಕಾರ್ಟ್ ನಂತಹ ಬೃಹತ್ ಕಾರ್ಪೋರೇಟ್ ಕಂಪನಿಗಳಲ್ಲಿ ಕೆಲಸ ಮಾಡಿದ ಹೆಚ್ ಆರ್ ಗಳನ್ನ ಕರೆಯಿಸಿ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮ ನಡೆಸಲಾಯಿತು.. ಮುಂದಿನ ದಿನಗಳಲ್ಲಿ HR CONCLEVE ಪ್ರತಿಷ್ಠಿತ ಕಂಪನಿಗಳಿಂದ ತಮ್ಮ ಅನುಭವಗಳ ಶೇಖರಣೆ ಮಾಡಿ ಅದನ್ನು ಬುಕ್ ನ ಮೂಲಕ ಬಿಡುಗಡೆ ಮಾಡುತ್ತೇವೆ. ಇದರಿಂದ ಭಾರತ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದು ಅಲಯನ್ಸ್ ಯೂನಿವರ್ಸಿಟಿ ಪ್ರೋ ಚಾನ್ಸಲರ್ ಅಭಯ ಚಬ್ಬಿ ತಿಳಿಸಿದರು.
Kshetra Samachara
24/04/2022 05:35 pm