ಬೆಂಗಳೂರು : ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದ್ರೆ ಇಲ್ಲಿ ಪಾಳುಬಿದ್ದು, ಇನ್ನೇನು ಶಾಲೆ ಮುಚ್ಚಲ್ಪಡ್ತದೆ ಎನ್ನುವಷ್ಟರಲ್ಲಿ ಸಹೃದಯ ಗ್ರಾಮಸ್ಥರ ನಿರಂತರ ಪ್ರಯತ್ನದ ಫಲವಾಗಿ ಶಾಲೆಗೆ 50ಮಕ್ಕಳು ಅಡ್ಮಿಶನ್ ಆಗಿದೆ.
ಹೌದು ಕೊರೊನಾ ಸಂಕಷ್ಟದಲ್ಲಿ ಇಂತಹ ಸಾರ್ಥಕ ಕೆಲಸಕ್ಕೆ ಸಾಕ್ಷಿಯಾಗಿದೆ ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಚಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಇದೀಗ ಈ ಶಾಲಾ ಮಕ್ಕಳ ಕಲಿಕಾ ಚೇತರಿಕೆಗೆ ಹಾಡು, ನೃತ್ಯ, ಪೆಯಿಂಟಿಂಗ್ ನೆರವಾಗಿದೆ. ಈ ಮೂಲಕ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಲ್ಲಿ ನವೋಲ್ಲಾಸ ಮೂಡಿದೆ.
ಕೋವಿಡ್ ಹಿನ್ನಲೆಯಲ್ಲಿ ಕಳೆದ 2ವರ್ಷಗಳಿಂದ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲೆಯ ಚಟುವಟಿಕೆಗಳು ಸಂಪೂರ್ಣ ಸ್ಥಗಿತವಾಗಿತ್ತು. ಇದರಿಂದ ಮಕ್ಕಳ ಕಲಿಕಾ ಆಸಕ್ತಿ ಕಡಿಮೆಯಾಗಿತ್ತು.
ಮತ್ತೆ ಚಿಕ್ಕ ಮಕ್ಕಳ ಮನಃಸ್ಥಿತಿಗೆ ತಕ್ಕಂತೆ ಆಟ, ಓಟ, ಹಾಡು, ನೃತ್ಯ, ನಾಟಕ & ಇಷ್ಟ ಬಂದ ರೀತಿ ಪೆಯಿಂಟಿಂಗ್ ಮಾಡುತ್ತಾ ಮಕ್ಕಳು ಕಲಿಕಾ ಆಸಕ್ತಿ ಬೆಳೆಸಿಕೊಂಡಿದ್ದಾರೆ.
ಚಲ್ಲಹಳ್ಳಿ ಶಾಲಾ ಮಕ್ಕಳು ಮಾಡಿದ ಪೆಯಿಂಟಿಂಗ್ ಗೆ ಶಾಲಾಗೋಡೆ ಕಲಾತ್ಮವಾಗಿ ಜನರನ್ನ ರಂಜಿಸುತ್ತಿವೆ. ಇನ್ನು ಕರ್ನಾಟಕ ಜನಾರೋಗ್ಯ ಚಳುವಳಿ ಹೆಸರಿನ ಎರಡು ದಿನದ ತರಬೇತಿಯಲ್ಲಿ ಮಕ್ಕಳು ಕಲಿತು ಪ್ರದರ್ಶಿಸಿದ ಹಾಡು & ನೃತ್ಯ ಜನರನ್ನು ರಂಜಿಸಿದವು.
ಸದ್ಯ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯೋ ರೀತಿ ಯಲಹಂಕ ಚಲ್ಲಹಳ್ಳಿಯ ಸರ್ಕಾರಿ ಕನ್ನಡ ಮತ್ತು ಇಂಗ್ಲಿಷ್ ಮೀಡಿಯಂ ಶಾಲೆ ಮೈಕೊಡವಿ ನಿಂತಿದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳ ಕಲಿಕಾ ಚೇತರಿಕೆಗೆ 2 ದಿನಗಳ ಕಲಿಕಾ ಚೇತರಿಕೆ ಶಿಬಿರ ಮಕ್ಕಳಿಗೆ ಖುಷಿ ನೀಡಿದೆ.
ಸುರೇಶ್ ಬಾಬು Public Next ಯಲಹಂಕ..
PublicNext
04/06/2022 12:41 pm