ಬೆಂಗಳೂರು: ಬಿಡಿಎ ಬ್ರಹ್ಮಾಂಡ ಭ್ರಷ್ಟಾಚಾರದ ತನಿಖೆ ಎಸಿಬಿಯಲ್ಲಿ ಮುಂದುವರಿದಿದೆ.ಮೊದಲಿಗೆ ಬಿಡಿಎ ನಲ್ಲಿ ನಡೆದಿದ್ದು 300 ಕೋಟಿ ಆಕ್ರಮ ಎಂದು ಅಂದಾಜಿಸಲಾಗಿತ್ತು ಆದ್ರೆ ತನಿಖೆಯಲ್ಲಿ ಭಯಲಾಗ್ತಿರೋದು 300 ಕೋಟಿ ಅಲ್ಲ 2000 ಕೋಟಿಗೂ ಅಧಿಕ ಭ್ರಷ್ಟಾಚಾರ ಆಗಿದೆ ಎನ್ನುವುದು ಎಸಿಬಿ ತನಿಖೆಯಲ್ಲಿ ಬಟಾಬಯಲಾಗ್ತಾ ಇದೆ.
ಕಾರ್ನರ್ ಸೈಟ್, ಅಕ್ರಮ ಪರಭಾರೆ, ನಕಲಿ ಫಲಾನುಭವಿಗಳು, ಹಾಗೂ ಬದಲಿ ನಿವೇಶನ ಹಂಚಿಕೆಯಲ್ಲಿ ಸಾಕಷ್ಟು ಅಕ್ರಮ ನಡೆದಿರೋದು ಎಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮೂರುತಿಂಗಳ ಹಿಂದೆ ಬಿಡಿಎ ಮುಖ್ಯ ಕಚೇರಿಮೇಲೆ ಎಸಿಬಿ ದಾಳಿ ನಡೆಸಿತ್ತು.ಈ ವೇಳೆ ಸಾಕಷ್ಟು ದಾಖಲೆಗಳನ್ನ ಎಸಿಬಿ ವಶಪಡಿಸಿಕೊಂಡಿತ್ತು.
ಒಂದೇ ಗ್ರಾಮದಲ್ಲಿ 185 ಕೋಟಿ ಆಕ್ರಮ ಬೆಳಕಿಗೆ
ಎಸ್ ಕೆಂಗೇರಿ ಹೋಬಳಿಯ ಭೀಮನಕುಪ್ಪೆ ಗ್ರಾಮದ ಅರ್ಕಾವತಿ ಬಡವಾಣೆಯಲ್ಲಿ ಭಾರಿ ಅಕ್ರಮ ನಡೆದಿರೋದು ಕಂಡು ಬಂದಿದ್ದು,ಸರ್ಕಾರದ ಜಾಗವನ್ನೆ ಖಾಸಗಿ ಜಾಗ ಅಂತ ತೋರಿಸಿ ಸರ್ಕಾರದಿಂದ ಭ್ರಷ್ಟ ಅಧಿಕಾರಿಗಳು ಪರಿಹಾರ ಪಡೆದುಕೊಂಡಿದ್ದಾರೆ.
ಸರ್ಕಾರಿ ಜಾಗಕ್ಕೆ ಸುಮಾರು 185 ಕೋಟಿ ಪರಿಹಾರ ಪಡೆದಿರುವುದು ಪತ್ತೆ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಭ್ರಷ್ಟ ಅಧಿಕಾರಿಗಳ ಕೈಗೆ ಕೊಳತೊಡಿಸಲು ಎಸಿಬಿ ಒಂದಷ್ಟು ದಾಖಲೆಗಳನ್ನು ಕಲೆ ಹಾಕ್ತಿದೆ.
ಇನ್ನೂ ಹಸಿರು ವಲಯದಲ್ಲಿ ಐಷಾರಾಮಿ ವಿಲ್ಲಾಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದ ಬಿಡಿಎ,ಹಸಿರು ವಲಯಕ್ಕೆ ಒಳಪಡುವ ಹೆಣ್ಣೂರು ಬಳಿ ಗಾಲ್ಫ್ ಮೈದಾನದ ನಿರ್ಮಾಣದ ಹೆಸರಲ್ಲಿ ಪ್ರತಿಷ್ಟಿತ ವಿಲ್ಲಾಗಳ ನಿರ್ಮಾಣಕ್ಕೆ ಅನುಮತಿ ನೀಡಿದೆ.ಈ ಸ್ಥಳದಲ್ಲಿ ಸುಮಾರು 460 ವಿಲ್ಲಾಗಳನ್ನ ಅನಧಿಕೃತವಾಗಿ ಪ್ರತಿಷ್ಟಿತ ರಿಯಲ್ ಎಸ್ಟೇಟ್ ಕಂಪನಿ ನಿರ್ಮಾಣ ಮಾಡಿದೆ.
60 ನಿವೇಶನಗಳನ್ನ ನುಂಗಿರುವ ಬಿಡಿಎ ಅಧಿಕಾರಿಗಳು
ಇನ್ನೂ ನಗರದ ವಿವಿಧ ಲೇಔಟ್ ಗಳಲ್ಲಿ ಮುಂಜೂರಾಗದೆ ಉಳಿದ 60 ನಿವೇಶನಗಳನ್ನ ಅಧಿಕಾರಿಗಳೇ ಗುಳುಂ ಸ್ವಾಹ ಮಾಡಿರೋದು ಬೆಳಕಿಗೆ ಬಂದಿದೆ.ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳನ್ನು ಅಧಿಕಾರಿಗಳೇ ನುಂಗಿ ನೀರು ಕುಡಿರೋದು ಬೆಳಕಿಗೆ ಬಂದಿದೆ.ಬಿಡಿಎ ಈ ಬೃಹತ್ ಅಕ್ರಮದಲ್ಲಿ 60 ಅಧಿಕಾರಿಗಳು ಭಾಗಿಯಾಗಿರೋದನ್ನ ಎಸಿಬಿ ಗುರುತಿಸಿದ್ದು,ಈಗಾಗಲೇ 45 ಅಧಿಕಾರಿಗಳ ಮೇಲೆ ಎಫ್ ಐ ಆರ್ ದಾಖಲು ಮಾಡಲು ಅನುಮತಿ ಪಡೆದಿರುವ ಎಸಿಬಿ ತನಿಖೆಯನ್ನು ಚುರುಕುಗೊಳಿಸಿದೆ.
Kshetra Samachara
12/02/2022 02:45 pm