ದೊಡ್ಡಬಳ್ಳಾಪುರ: ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಕೆರೆಗಳಿಗೆ ದೊಡ್ಡಬಳ್ಳಾಪುರ ನಗರ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕೆ ಪ್ರದೇಶದ ವಿಷಯುಕ್ತ ನೀರು ಸೇರುತ್ತಿದ್ದು, ಇದನ್ನು ನಿಲ್ಲಿಸದಿದ್ದರೆ ಮ್ಯಾನ್ ಹೋಲ್ ಗಳಿಗೆ ಕಾಂಕ್ರೀಟ್ ಸುರಿದು ಬಂದ್ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ಕೊಟ್ಟಿದ್ದಾರೆ!
ಈ ನದಿ ಪಾತ್ರದ ತಿಪ್ಪಾಪುರ, ಚಿಕ್ಕತುಮಕೂರು, ದೊಡ್ಡತುಮಕೂರು, ಮಜರಾಹೊಸಹಳ್ಳಿ ಕೆರೆಗಳಿಗೆ ವಿಷಯುಕ್ತ ನೀರು ಸೇರುತ್ತಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ , ಶಾಸಕ ಟಿ.ವೆಂಕಟರಮಣಯ್ಯ ಅವರು ಕೆರೆಗಳು ಮತ್ತು ನಗರಸಭೆ STP ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಸುತ್ತಮುತ್ತಲಿನ ಗ್ರಾಮಸ್ಥರು ವಿಷಯುಕ್ತ ನೀರಿನಿಂದ ಆಗುತ್ತಿರುವ ಸಮಸ್ಯೆ ಮನವರಿಕೆ ಮಾಡಿಕೊಟ್ಟರು.
ತ್ಯಾಜ್ಯ ನೀರಿನಿಂದಾಗಿ ನದಿ ಪಾತ್ರದ ಕೆರೆಗಳ ನೀರೆಲ್ಲ ವಿಷವಾಗಿದೆ. ಈ ನೀರು ಕುಡಿದು ನೂರಾರು ಮೇಕೆ, ಕುರಿಗಳು ಸಾವನ್ನಪ್ಪಿವೆ. ಜಾನುವಾರು ಅನಾರೋಗ್ಯಕ್ಕೆ ತುತ್ತಾಗಿವೆ. ಮತ್ತೆ ವಿಷಯುಕ್ತ ನೀರು ಕೆರೆಗೆ ಬಿಟ್ಟರೆ ನಗರಸಭೆಯ ಮ್ಯಾನ್ ಹೋಲ್ ಗಳಿಗೆ ಕಾಂಕ್ರೀಟ್ ಸುರಿದು, ಕಾಲುವೆಗಳನ್ನು ಬಂದ್ ಮಾಡುತ್ತೇವೆ ಎಂದು ಗ್ರಾಮಸ್ಥರು ಖಡಕ್ ವಾರ್ನಿಂಗ್ ನೀಡಿದ್ದಾರೆ.
Kshetra Samachara
04/02/2022 11:30 am