ಬೆಂಗಳೂರು: ನಗರದಿಂದ ಕೂಗಳತೆ ದೂರದಲ್ಲಿರುವ ಈ ಕೆರೆಯಲ್ಲಿ ಮೀನುಗಳ ಮಾರಣಹೋಮ ನಡೆದಿದೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಈ ಕೆರೆಯ ಹೆಸರು ಕುಪ್ಪರೆಡಿ ಕೆರೆ. ಮೀನುಗಳು ಎಲ್ಲೆಂದರಲ್ಲಿ ಸತ್ತು ಬಿದ್ದಿರುವ ದೃಶ್ಯವು ಕಂಡುಬರುತ್ತಿದೆ.
ಇಲ್ಲಿನ ಊರಿನ ಜನ ಇದು ಮಾಟ-ಮಂತ್ರಕ್ಕೆ ಬಲಿ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಮೀನಿನ ಮಾರಣಹೋಮದಿಂದ ಈ ಕೆರೆಯ ಮೀನುಗಳು ಹಿಡಿಯಲು ಟೆಂಡರ್ ಪಡೆದ ಕಾಂಟ್ರ್ಯಾಕ್ಟರ್ ಬೀದಿಗೆ ಬರುವ ಸ್ಥಿತಿಯಲ್ಲಿ ಇದ್ದಾರೆ. ಲಕ್ಷಾಂತರ ರೂಪಾಯಿಗಳನ್ನು ಕಳೆಕೊಂಡಿರುವ ಕಾಂಟ್ರ್ಯಾಕ್ಟರ್‌ಗೆ ಈಗ ದಿಕ್ಕೇ ತೋಚದಂತಾಗಿದೆ.
ಸ್ಥಳದಿಂದ ನಮ್ಮ ಪ್ರತಿನಿಧಿ ನವೀನ್ ಕಾಂಟ್ರ್ಯಾಕ್ಟರ್‌ನ ಪರಿಸ್ಥಿತಿ ಮತ್ತು ಕೆರೆಯ ಈಗಿನ ಸ್ಥಿತಿ ಹೇಗಿದೆ ಎಂದು ತೋರಿಸುತ್ತಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
11/05/2022 06:08 pm