ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೋಟಿ ಕೋಟಿ ತೆರಿಗೆ ಕಟ್ಟದೇ ಮಾಲ್‌ಗಳ ಕಳ್ಳಾಟ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಮುಖ ಆಕರ್ಷಣೆ ಎಂದರೇ ಟೂತ್ ಪೇಸ್ಟ್ ನಿಂದ ಆರಂಭಿಸಿ ಐಷಾರಾಮಿ ವಸ್ತುವಿನ ತನಕ ಎಲ್ಲವನ್ನೂ ಒಂದೇ ಸೂರಿನಡಿ ಒದಗಿಸುವ ಮಾಲ್‌ಗಳು. ಆರಂಭದಲ್ಲಿ ಒಂದೆರಡು ಸಂಖ್ಯೆಯಲ್ಲಿದ್ದ ಮಾಲ್‌ಗಳು ಈಗ ಹತ್ತಾರು ಸಂಖ್ಯೆಯಲ್ಲಿ ತಲೆ ಎತ್ತಿದ್ದು ವೀಕೆಂಡ್‌ನಲ್ಲಿ ಲಕ್ಷಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಸುತ್ತವೆ. ಆದರೆ ಹೀಗೆ ಲಕ್ಷಾಂತರ ರೂಪಾಯಿ ವಹಿವಾಟು ನಡೆಸೋ ಮಾಲ್‌ಗಳು ಬಿಬಿಎಂಪಿಗೆ ಮಾತ್ರ ಕೋಟ್ಯಾಂತರ ರೂಪಾಯಿ ತೆರಿಗೆ ಉಳಿಸಿಕೊಂಡಿವೆ.

ಬಿಬಿಎಂಪಿ ತೆರಿಗೆ ಬಾಕಿ ಉಳಿಸಿಕೊಂಡು ಕಳ್ಳಾಟ ಆಡ್ತಾ ಇರೋದು ಇದೇ ಮೊದಲೇನಲ್ಲ. ಈಗಾಗಲೇ ತೆರಿಗೆ ಬಾಕಿ ಉಳಿಸಿಕೊಂಡ ಕಾರಣಕ್ಕೆ ನಗರದ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಈಗಾಗಲೇ ನಾಲ್ಕು ಭಾರಿ ಬೀಗ ಹಾಕಲಾಗಿದೆ. ಆದರೆ ಇದರಿಂದ ಯಾವ ಮಾಲ್ ಗಳು ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಇನ್ನೂ ನಗರದ ನೂರಾರು ಮಾಲ್‌ಗಳು ಬಿಬಿಎಂಪಿಗೆ ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿಸಬೇಕಿದೆ.

ನಗರದ ಪ್ರಮುಖ 44 ಮಾಲ್‌ಗಳ ಪೈಕಿ 7 ಪ್ರತಿಷ್ಠಿತ ಮಾಲ್‌ಗಳಿಂದ ಇನ್ನು ತೆರಿಗೆ ಬಾಕಿ ಉಳಿಸಿಕೊಂಡಿವೆ. ಬಿಬಿಎಂಪಿ ದಾಖಲೆಗಳ ಪ್ರಕಾರ ಬೆಂಗಳೂರಿನ ಪ್ರತಿಷ್ಟಿತ ಮಾಲ್ ಗಳಿಂದ 46 ಕೋಟಿ, 70 ಲಕ್ಷ ರೂ. ತೆರಿಗೆ ಬಾಕಿ ಇದೆ.

ಯಾವ ಯಾವ ಮಾಲ್‌ಗಳಿಂದ ಎಷ್ಟೆಷ್ಟು ತೆರಿಗೆ ಬಾಕಿ ಇದೆ ಅನ್ನೋದನ್ನು ನೋಡೋದಾದರೇ,

ಜಿಟಿ ಮಾಲ್: 3,15,74,989, ಕೋಟಿ ( 2019-20 ರಿಂದ ಬಾಕಿ )

ಮಂತ್ರಿ ಮಾಲ್: 27,11,13,104 ಕೋಟಿ (2018 – 19 ರಿಂದ ಬಾಕಿ )

ರಾಕ್ ಲೈನ್ ಮಾಲ್: 6,64,90,228 ಕೋಟಿ ( 2015-16 ರಿಂದ ಬಾಕಿ )

ರಾಯಲ್ ಮೀನಾಕ್ಷಿ ಮಾಲ್: 4,96,61,028 ಕೋಟಿ ( 2022-23 ರಿಂದ ಬಾಕಿ)

ಮಹದೇವಪುರ ವರ್ಜಿನಿಯಾ ಮಾಲ್: 60,92,868 ಲಕ್ಷ ( 2020- 21 ರಿಂದ ಬಾಕಿ )

ಟೋಟಲ್ ಮಾಲ್: 3,66,43,448 ಕೋಟಿ ( 2018 – 19 ರಿಂದ ಬಾಕಿ )

ವಿಆರ್ ಮಾಲ್: 3, 66, 43, 448 ಕೋಟಿ ಬಾಕಿ

ಒಟ್ಟು – 46,70,42,032 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಮಾಲ್‌ಗಳು ಇನ್ನೂ ತೆರಿಗೆ ಪಾವತಿಗೆ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಸದ್ಯದಲ್ಲೇ ಬಿಬಿಎಂಪಿ ಕಾನೂನು ಕ್ರಮದ ಮೂಲಕ ತೆರಿಗೆ ವಸೂಲಿಗೆ ಸಿದ್ಧತೆ ನಡೆಸಿದೆ.

ಗಣೇಶ್ ಹೆಗಡೆ ಪಬ್ಲಿಕ್ ನೆಕ್ಷ್ಟ್ ಬೆಂಗಳೂರು

Edited By : Somashekar
PublicNext

PublicNext

20/06/2022 03:07 pm

Cinque Terre

18 K

Cinque Terre

0

ಸಂಬಂಧಿತ ಸುದ್ದಿ