ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭೂಮಿ ಕಬಳಿಸೋಕೆ ಕಿಡಿಗೇಡಿಗಳು ಇಲ್ದೇ ಇರೋ ಡಾಕ್ಯುಮೆಂಟ್ಸ್ ಮಾಡಿ ನಾಮ ಎಳೀತಾರೆ. ಆದ್ರೆ, ಇಲ್ಲೊಂದು ಹೌಸಿಂಗ್ ಸೊಸೈಟಿಯೇ ಬೋಗಸ್ ಮಾಡಿ ವಂಚಿಸಿರೋ ಪ್ರಕರಣ ಬೆಳಕಿಗೆ ಬಂದಿದ್ದು, ದೂರಿನ ಮೇರೆಗೆ ನಿರ್ದೇಶಕ ಹಾಗೂ ಸಿಇಒ ರನ್ನು ಬಂಧಿಸಿರೋ ಪೊಲೀಸ್ರು ತನಿಖೆ ಮುಂದುವರೆಸಿದ್ದಾರೆ.
ಸೈಟ್ ಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದ್ದಂತೆಯೇ ಒಂದ್ ಕಡೆ ಭೂಗಳ್ಳರ ಹಾವಳಿ, ಮತ್ತೊಂದೆಡೆ ನಕಲಿ ದಾಖಲೆ ವೀರರಿಂದ ವಂಚನೆ. ಪ್ರತಿನಿತ್ಯ ಒಂದಲ್ಲಾ ಒಂದ್ ಕಡೆ ಈ ರೀತಿ ವಂಚನೆ ನಡೆಯುತ್ತಲೇ ಇವೆ. ಈ ರೀತಿ ದಾಖಲೆ ಬೋಗಸ್ ಮಾಡಿದ್ದಾರೆ ಅನ್ನೋ ದೂರುಗಳು ಪೊಲೀಸ್ ಠಾಣೆ ಮೆಟ್ಟಿಲೇರ್ತಲೇ ಇವೆ.
ಅದೇ ರೀತಿ ವಂಚನೆ ಪ್ರಕರಣವೊಂದು ಶೇಷಾದ್ರಿಪುರಂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನಿಖೆ ಕೈಗೊಂಡ ಪೊಲೀಸ್ರು ಹೌಸಿಂಗ್ ಸೊಸೈಟಿಯ ಹಾಲಿ ನಿರ್ದೇಶಕ ಕಂ ಸಿಇಒ ಪ್ರತಾಪ್ ಚಂದ್ ರಾಥೋಡ್ ನನ್ನು ಬಂಧಿಸಿದ್ದಾರೆ.
ಶೇಷಾದ್ರಿಪುರಂ ರೈಲ್ವೆ ಪ್ಯಾರರಲ್ ರಸ್ತೆಯಲ್ಲಿರೋಈ ನ್ಯಾಷನಲ್ ಟೆಕ್ನಿಕಲ್ ಇನ್ ಸ್ಟಿಟ್ಯೂಷನ್ ನ ಹೌಸಿಂಗ್ ಸೊಸೈಟಿಯಲ್ಲಿ ಹಾಲಿ ನಿರ್ದೇಶಕರಾಗಿ ಹಾಗೂ ಸಿಇಒ ಆಗಿ ಕೆಲ್ಸ ಮಾಡ್ತಿದ್ರು. ಇವ್ರ ಅವಧಿಯಲ್ಲಿ ಎನ್ಐಟಿ ಯಿಂದ ಕೊಡಿಗೇಹಳ್ಳಿ ಬಳಿ ನಿರ್ಮಿಸಿರೋ ಲೇಔಟ್ ನಲ್ಲಿ ಬಿಡಿಎ ಅನುಮೋದಿತ ನಕ್ಷೆಯಲ್ಲಿರುವ ನಿವೇಶನಗಳನ್ನ ಮಾರಾಟ ಮಾಡಲು ಎನ್.ಟಿ.ಐ. ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಅನುಮತಿಯಿತ್ತು. ಆದರೆ, ಬಿಡಿಎ ನಕ್ಷೆಯಲ್ಲಿ ಅನುಮೋದನೆ ಪಡೆಯದೇ ಇರುವ ಸೈಟ್ ಗಳನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದ್ದು, ಆರೋಪಿಗಳ ವಿರುದ್ಧ ಹಲವು ದೂರುಗಳು ಬಂದಿತ್ತು.
ಮಾಜಿ ಅಧ್ಯಕ್ಷ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದ ಶೇಷಾದ್ರಿಪುರಂ ಪೊಲೀಸ್ರು, ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ, ಎನ್ಐಟಿ ಗೃಹ ನಿರ್ಮಾಣ ಸಂಸ್ಥೆಯ ಹೆಸ್ರನ್ನ ದುರ್ಬಳಕೆ ಮಾಡಿಕೊಂಡು ಮಾರಾಟ ಮಾಡಿರೋದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಘದ ಹಾಲಿ ನಿರ್ದೇಶಕ ರಾಮಕೃಷ್ಣರೆಡ್ಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಾಪ್ ಚಂದ್ ರಾಥೋಡ್ ನನ್ನು ಬಂಧಿಸಲಾಗಿದೆ.
ಸದ್ಯ, ಆರೋಪಿಗಳನ್ನ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದಿರೋ ಪೊಲೀಸ್ರು, ಆರೋಪಿಗಳು ಈ ರೀತಿ ನಕಲಿ ದಾಖಲೆಗಳನ್ನ ಸೃಷ್ಟಿಸಿ ಇನ್ನೆಷ್ಟು ಮಂದಿಗೆ ವಂಚಿಸಿದ್ದಾರೆ ಅನ್ನೋದ್ರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ಅಷ್ಟೇ ಅಲ್ಲದೆ, ತಲೆ ಮರೆಸಿಕೊಂಡಿರೋ ಮಾಜಿ ಅಧ್ಯಕ್ಷನಾಗಿರೋ ಶೃಂಗೇಶ್ವರ ಎಂಬಾತನ ಬಂಧನಕ್ಕೆ ಬಲೆ ಬೀಸಿದ್ದಾರೆ.
- ಶ್ರೀನಿವಾಸಚಂದ್ರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
02/10/2022 05:41 pm