ಇನ್ ಸೈಡ್ ವರದಿ- ಗಣೇಶ್ ಹೆಗಡೆ
ಬೆಂಗಳೂರು - ಬೃಹತ್ ಬೆಂಗ ಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಯ ಪೌರ ಕಾರ್ಮಿಕರಿಗೆ ಬಿಸಿಯೂ ಟ ಯೋಜನೆಗೆ ಸಂಬಂಧಿಸಿದಂತೆ ಇಸ್ಕಾನ್ ಸಹ ಸಂಸ್ಥೆ ಟಚ್ ಸ್ಟೋನ್ ಫೌಂಡೇಷನ್‌ಗೆ 4 (ಜಿ) ವಿನಾಯಿತಿ ನೀಡಲು ಆರಂಭದಲ್ಲಿ ತಕ ರಾರು ತೆಗೆದಿದ್ದ ಆರ್ಥಿಕ ಇಲಾಖೆಯು ನಂತರ ಹಿರಿಯ ಐಎಎಸ್ ಅಧಿಕಾರಿ ಒತ್ತಡಕ್ಕೆ ಮಣಿದು ತನ್ನ ನಿಲುವನ್ನು ಬದಲಿಸಿರುವುದು ಇದೀಗ ಬಹಿರಂಗವಾಗಿದೆ.
4( ಜಿ) ವಿನಾಯತಿ ನೀಡಲು 2021ರ ಜುಲೈ 26ರಂದು ಪತ್ರ ಬರೆದು ತಕರಾರು ತೆಗೆದಿದ್ದ ಆರ್ಥಿಕ ಇಲಾಖೆಯು ಕೇವಲ ಮೂರು ತಿಂಗಳಲ್ಲಿ ಅಂದರೆ 2021 ಅಕ್ಟೋಬರ್ 22 ರಂದು 4( ಜಿ) ವಿನಾಯಿತಿ ನೀಡಿ ಆದೇಶ ಹೊರಡಿಸಿ ಒತ್ತಡಕ್ಕೆ ಮಣಿದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಈ ಪ್ರಕರಣದಲ್ಲಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಅತ್ಯಾಸಕ್ತಿ ವಹಿಸಿದ್ದರ ಪರಿಣಾಮವೇ ಆರ್ಥಿಕ ಇಲಾಖೆ ನಿಲುವು ಬದಲಸಿಲು ಕಾರಣ ಎಂದು ಹೇಳಲಾಗುತ್ತಿದೆ.
ಆರ್ ಆರ್ ನಗರ ಹಾಗೂ ಮಹದೇವ ಪುರ ಹೊರತುಪಡಿಸಿ ಬಿಬಿಎಂಪಿ 4 ವಲಯಗಳ ವ್ಯಾಪ್ತಿಯ ಪೌರ ಕಾರ್ಮಿಕರಿಗೆ ಬಿಸಿಯೂಟ ಒದಗಿಸಲು 4( ಜಿ) ವಿನಾಯತಿ ನೀಡಲಾಗಿದೆ. ಈ ಸಂಸ್ಥೆಯು ಉತ್ತಮ ಗುಣಮಟ್ಟದ ಸಮಂಜಸ ದರದಲ್ಲಿ ನೀಡು ವುದನ್ನು ಕಡ್ಡಾಯವಾಗಿ ಧೃಡಪಡಿಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿ ಮುಖ್ಯ ಆಯುಕ್ತರಿಗೆ 2022 ಜನವರಿ 17 ರಂದು ಪತ್ರ ಬರೆದಿತ್ತು.
PublicNext
09/05/2022 12:59 pm