ಬೆಂಗಳೂರು: ಮಹಾನಗರದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಮಹಾಮಾರಿಯನ್ನು ಕಟ್ಟಿಹಾಕಲು ಸರ್ಕಾರ ಕೂಡ ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ ಜಾರಿಗೊಳಿಸಿದೆ. ಇನ್ನು ಬೆಂಗಳೂರು ಮೆಟ್ರೋ ರೈಲುಗಳಲ್ಲೂ ಹೊಸ ನಿಯಮ ಜಾರಿಯಾಗಿದೆ. ನಮ್ಮ ಮೆಟ್ರೋ ರೈಲುಗಳಲ್ಲಿ ನಿಂತು ಪ್ರಯಾಣಿಸೋದಕ್ಕೆ ಬ್ರೇಕ್ ಹಾಕಲಾಗಿದೆ. ಅಲ್ಲದೇ ಸೀಟು ಭರ್ತಿಯಾದ್ರೆ ನಿಲ್ದಾಣದ ಒಳಗೂ ಪ್ರವೇಶವನ್ನು ನಿಷೇಧಿಸಲಾಗಿದೆ.
ಈ ಕುರಿತಂತೆ ಬಿಎಂಆರ್‌ಸಿಎಲ್ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಕೊರೋನಾ ನಿಯಂತ್ರಣ ಕ್ರಮವಾಗಿ ರಾಜ್ಯ ಸರ್ಕಾರ ನೂತನ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಮಾರ್ಗಸೂಚಿಯಂತೆ ಕೋವಿಡ್ ನಿಯಂತ್ರಣ ಕಾರ್ಯ ಮಾಡೋದು ನಮ್ಮ ನಿಮ್ಮೆಲ್ಲರ ಕೆಲಸವಾಗಿದೆ. ಕೋವಿಡ್ ನಿಯಂತ್ರಣ ಕ್ರಮವಾಗಿ ಇನ್ಮುಂದೆ ಸೀಟುಗಳ ಭರ್ತಿಗೆ ಮಾತ್ರವೇ ನಮ್ಮ ಮೆಟ್ರೋ ರೈಲಿನಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದೆ.
PublicNext
12/01/2022 07:19 pm