ಬೆಂಗಳೂರು : ಬೆಂಗಳೂರಿನ ಮಂದಿ ನಿರಂತರ ಮಳೆಯಿಂದ ಬೆಸತ್ತು ಹೋಗಿದ್ದಾರೆ. ಇರಲು ಜಾಗವಿಲ್ಲದೆ ನರಳಾಡುತ್ತಿದ್ದಾರೆ. ಈ ವಿಷಮ ಪರಿಸ್ಥಿತಿಯಲ್ಲಿ ಸಿಲಿಕಾನ್ ಸಿಟಿಯ ಹೋಟೆಲ್ ನವರು ಮಾನವೀಯತೆ ಮೆರೆಯುತ್ತಿದ್ದಾರೆ.
ಹೌದು ನಿರಂತರ ಮಳೆಯಿಂದ ಕಂಗೆಟ್ಟ ಬೆಂಗಳೂರು ಮಂದಿಗೆ ಮನೆಗಿಂತ ಪ್ರಾಣ ಮುಖ್ಯವಾದದ್ದು, ಮನೆಗೆ ಮಳೆ ನೀರು ನುಗ್ಗುವ ಮನೆಯವರು, ಕೆರೆ ಪಕ್ಕದಲ್ಲಿರುವ ಮನೆಯವ್ರು. ಹೋಟೆಲ್ ಗಳಲ್ಲಿ ರೂಮ್ ಮಾಡಿಕೊಳ್ಳಬಹುದು. ಕಡಿಮೆ ಬೆಲೆಗೆ ರೂಮ್ ಗಳನ್ನ ಕೊಡುವುದಾಗಿ ಹೋಟೆಲ್ ಅಸೋಸಿಯೇಷನ್ ನವರು ತೀರ್ಮಾನಿಸಿದೆ.
ಈ ಬಗ್ಗೆ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನಮ್ಮ ಈ ನಿರ್ಧಾರ ಆಫರ್ ಎಂದು ತಿಳಿದಿಳ್ಳಬೇಡಿ, ನಾವು ಕೂಡ ಬೆಂಗಳೂರಿಗರೇ ನಾವು ನೆರೆ ರಾಜ್ಯ ಸೇವ್ ಅಂತ ಹಾಕಿಕೊಂಡು, ಕೈಲಾದ ಸಹಾಯಗಳನ್ನ ಮಾಡಿದ್ದೇವೆ. ಇನ್ನೂ ನಮ್ಮ ಬೆಂಗಳೂರಿಗರಿಗೆ ಇಂತಹ ಪರಿಸ್ಥಿತಿ ಬಂದ್ರೆ ಹಾಗೆ ಇರೋದಕ್ಕೆ ಆಗುತ್ತಾ ಹಾಗಾಗಿ ನಮ್ಮ ಕೈಲಾದ ಸಹಾಯ ಮಾಡಬೇಕೆಂದು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.
ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
06/09/2022 10:37 pm