ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಕಾರ್ಯಾಚರಣೆ ಪ್ರಾರಂಭಿಸಿದ 2008ರಿಂದ 2022ರವರೆಗೆ 250 ಮಿಲಿಯನ್ (25 ಕೋಟಿ) ಪ್ರಯಾಣಿಕರಿಗೆ ಸೇವೆ ನೀಡಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ಕೊರೊನಾದಿಂದ ಆದ ನಿಧಾನಗತಿಯ ನಡುವೆ ಬೆಂಗಳೂರು ವಿಮಾನ ನಿಲ್ದಾಣದಿಂದ 3 ವರ್ಷದ ಅವಧಿಯಲ್ಲಿ ಹೆಚ್ಚುವರಿಯಾಗಿ 50 ಮಿಲಿಯನ್ ಪ್ರಯಾಣಿಕರು ಸಂಚರಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣವು ಎಒಡಿಯಿಂದ 2 ಮಿಲಿಯನ್ ಏರ್ ಟ್ರಾಫಿಕ್ ಮೂವ್‌ಮೆಂಟ್ಸ್ ಕಂಡ ಮುಂಚೂಣಿಯ ವಿಮಾನ ನಿಲ್ದಾಣವಾಗಿದೆ. ಇನ್ನು ದಕ್ಷಿಣ ಭಾರತದಲ್ಲಿ ಈ ಮೈಲಿಗಲ್ಲು ಸಾಧಿಸಿದ ಅತ್ಯಂತ ವೇಗದ ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ) ವಿಮಾನ ನಿಲ್ದಾಣವಾಗಿದೆ.
ಹೊಸ ಕ್ಯಾರಿಯರ್‌ಗಳು, ಹೊಸ ಮಾರ್ಗಗಳ ಪರಿಚಯ, ಪ್ರಸ್ತುತದ ಮಾರ್ಗಗಳಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯು ಈ ಮಹತ್ತರ ಸಾಧನೆಯತ್ತ ಕೊಂಡೊಯ್ದಿದೆ. ಕರೋನಾ ಕಳೆದ ಎರಡು ವರ್ಷಗಳಿಂದ ಟ್ರಾಫಿಕ್ ಪ್ರಗತಿನ ಸಾಮಾನ್ಯಕ್ಕಿಂತ ನಿಧಾನಗತಿ ತಂದಿತ್ತು. ಆದರೆ ಬೆಂಗಳೂರು ವಿಮಾನ ನಿಲ್ದಾಣ ಐತಿಹಾಸಿಕವಾಗಿ ವೇಗವಾಗಿ ಬೆಳೆದಿದೆ. ಅದು ಇಷ್ಟು ತ್ವರಿತವಾಗಿ ಈ ಮೈಲಿಗಲ್ಲುಗಳನ್ನು ತಲುಪಿರುವುದು ಸಾಕ್ಷಿಯಾಗಿದೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್)ನ ಎಂ.ಡಿ. & ಸಿಇಒ ಹರಿಮರಾರ್, "250 ಮಿಲಿಯನ್ ಮೈಲಿಗಲ್ಲು ತಲುಪಿರುವುದು ಖುಷಿ ನೀಡಿದೆ. ಬೆಂಗಳೂರು ವಿಮಾನ ನಿಲ್ದಾಣ ವಿಶ್ವಮಟ್ಟದ ಮೂಲ ಸೌಕರ್ಯ-ಸೌಲಭ್ಯಗಳನ್ನು ಒದಗಿಸುತ್ತಿದೆ.
ಪ್ರಯಾಣಿಕರು ಹೊಸದಾಗಿ ಪ್ರಾರಂಭಿಸಲಾದ 080 ಲೌಂಜಸ್ ಅಂಡ್ ಟ್ರಾನ್ಸಿಟ್ ಹೋಟೆಲ್‌ನಲ್ಲಿ ಅವರ ನಿಲುಗಡೆಲಿ ಅತ್ಯುತ್ತಮ ಆತಿಥ್ಯಅನುಭವಿಸುತ್ತಿದ್ದಾರೆ. ಅತ್ಯಾಧುನಿಕ ಟರ್ಮಿನಲ್ -2 ಪ್ರಾರಂಭದೊಂದಿಗೆ ಬೆಂಗಳೂರು ವಿಮಾನ ನಿಲ್ದಾಣವು 'ಭಾರತಕ್ಕೆ ಹೊಸ ಹೆಬ್ಬಾಗಿಲು' ಆಗುವ ಗುರಿ ಹೊಂದಿದೆ.
ಪ್ರಯಾಣಿಕರು ಇತ್ತೀಚೆಗೆ 2022 ಸ್ಕೆಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್‌ನಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ "ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ" ಎಂದು ಮತದಾನ ಮಾಡಿರುವುದು ಇಲ್ಲಿ ಶ್ಲಾಘನೀಯ.
Kshetra Samachara
30/06/2022 10:26 pm