ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳ ವಿರುದ್ಧ, ಸೂರ್ಯನಗರ 4ನೇ ಹಂತ ವಿರೋಧಿಸಿ ಜನತಾ ಭೂಮಿ ಅದಾಲತ್

ಆನೇಕಲ್: ನೂರಾರು ವರ್ಷಗಳಿಂದ ರೈತರು ಸರ್ಕಾರಿ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಇದೀಗ ಸರ್ಕಾರ ಸೂರ್ಯನಗರ 4ನೇ ಹಂತದ ಬಡಾವಣೆ ನಿರ್ಮಾಣ ಮಾಡಲು ಮುಂದಾಗಿದ್ದು ಇದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಇಂಡ್ಲವಾಡಿ ಗ್ರಾಮದಲ್ಲಿ, ನಮ್ಮೂರ ಭೂಮಿ ನಮಗಿರಲಿ ಅನ್ಯರಿಗೆ ಅಲ್ಲ ಎನ್ನುವ ಹೆಸರಿನಲ್ಲಿ ಪರಿಸರವಾದಿಗಳು ಹಾಗೂ ರೈತರು ಜನತಾ ಭೂಮಿ ಅದಾಲತ್ ನಡೆಸುವ ಮೂಲಕ ಕರ್ನಾಟಕ ಹೌಸಿಂಗ್ ಬೋರ್ಡ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಕರ್ನಾಟಕ ಗೃಹ ಮಂಡಳಿ ಈಗಾಗಲೇ ಸೂರ್ಯನಗರ 4ನೇ ಹಂತದ ಯೋಜನೆಗೆ ಇಂಡ್ಲವಾಡಿ, ಬಗ್ಗನದೊಡ್ಡಿ, ಕಾಡುಜಕ್ಕನಹಳ್ಳಿ, ಬೊಮ್ಮಂಡಹಳ್ಳಿ ಮತ್ತು ಕೋನಸಂದ್ರ ವ್ಯಾಪ್ತಿಯಲ್ಲಿ 1947 ಎಕರೆ ಭೂಮಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಿದ್ದು ಈಗಾಗಲೇ ಕೆಲವು ರೈತರಿಂದ ಭೂಮಿ ವಶಪಡಿಸಿಕೊಳ್ಳಲಾಗಿದೆ, ಯೋಜನೆಯಿಂದ ನೂರಾರು ಜನ ರೈತರು ಕೃಷಿ ಭೂಮಿ ಕಳೆದುಕೊಳ್ಳುತ್ತಿರುವ ಆತಂಕದಿಂದ ನಮ್ಮ ಭೂಮಿಯನ್ನು ನೀಡುವುದಿಲ್ಲ ಎಂದು ಅಧಿಕಾರಿಗಳಿಗೆ ಹೇಳಿದರು ಸಹ ಮಧ್ಯವರ್ತಿಗಳ ಮೂಲಕ ಬೆದರಿಕೆ ಹಾಕಿ ಭೂಮಿಯನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಬೆಂಗಳೂರು ನಗರದಲ್ಲಿ ಒಂದೂವರೆ ಕೋಟಿ ಜನಕ್ಕೆ ಆಹಾರ, ಗಾಳಿ ಎಲ್ಲಿಂದ ಬರುತ್ತದೆ ಎನ್ನುವುದರ ಅರಿವು ಯಾರಿಗೂ ಇಲ್ಲದಂತಾಗಿದೆ ಎಂದು ಹಿರಿಯ ಪರಿಸರವಾದಿ ಅ.ನಾ ಯಲ್ಲಪ್ಪ ರೆಡ್ಡಿ ಕಿಡಿಕಾರಿದರು.

ಇನ್ನು ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್ ಕಮ್ಮರಡಿ ರಾಷ್ಟ್ರೀಯ ಕಾನೂನು ಶಿಕ್ಷಣ ಶಾಲೆಯ ಪ್ರೊ ಎಂ.ಕೆ ರಮೇಶ್ ರೈತ ನಾಯಕ ಸುನಂದಾ ಜಯರಾಂ ಮಹಿಳಾ ಹೋರಾಟಗಾರ್ತಿ ಮಧು ಭೂಷಣ್ ಮಮತಾ ಮುಂತಾದವರು ಭಾಗವಹಿಸಿದ್ದರು.

Edited By :
Kshetra Samachara

Kshetra Samachara

24/04/2022 05:10 pm

Cinque Terre

2.5 K

Cinque Terre

0

ಸಂಬಂಧಿತ ಸುದ್ದಿ