ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಜಯನಗರದಲ್ಲಿ ಸ್ವದೇಶಿ ಮೇಳ-ಹರಿದು ಬಂದ ಜನಸಾಗರ

ಬೆಂಗಳೂರಿನ ಜಯನಗರದ ಅಂಜನಿ ಮೈದಾನದಲ್ಲಿ ಸ್ವದೇಶಿ ಮೇಳವನ್ನು ಏರ್ಪಡಿಸಲಾಗಿದೆ. ಸಂಪೂರ್ಣ ಸ್ವದೇಶಿ ವಸ್ತುಗಳು, ಗೃಹಬಳಕೆ, ಗಿಡ, ಅಡುಗೆಮನೆ, ರಾಗಿ, ಭತ್ತ, ರಾಗಿ ಬೀಸುವ ಕಲ್ಲು, ಆಟದ ಸಾಮಾನು ಸೇರಿದಂತೆ ಮನುಷ್ಯ ಯೋಗ್ಯ ವಸ್ತುಗಳ ಮೇಳವನ್ನು ಏರ್ಪಡಿಸಲಾಗಿದೆ.

"ಸ್ವದೇಶಿ ಜಾಗರಣಾ ಮಂಚ್ " ಏಪ್ರಿಲ್ 06 ರಿಂದ 10 ರವರೆಗೆ ಸ್ವದೇಶಿ ಮೇಳವನ್ನು ಏರ್ಪಡಿಸಿದ್ದು, ಮೇಳಕ್ಕೆ ಸ್ವದೇಶಿ ವಸ್ತುಗಳನ್ನು ಇಷ್ಟಪಡುವ ಜನ ಹೆಚ್ಚಿನ‌ ಸಂಖ್ಯೆಯಲ್ಲಿ ಆಗಮಿಸಿ ಮೇಳಕ್ಕೆ ಕಳೆಕಟ್ಟಿದ್ದಾರೆ. ಬೃಹತ್ತಾದ ಜಾಗದಲ್ಲಿ ನೂರಾರು ಮಳಿಗೆಗಳನ್ನು ತೆರೆಯಲಾಗಿದ್ದು ಗಣ್ಯಾತಿಗಣ್ಯರು ಆಗಮಿಸಿ, ಸ್ವದೇಶಿ ಮೇಳಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಪ್ರಾರಂಭವಾಗಿರುವ ಮೇಳಕ್ಕೆ ಶನಿವಾರ ಮತ್ತು ಭಾನುವಾರ ಅತಿ ಹೆಚ್ಚಿನ ಸಂಖ್ಯೆಯ ಜನ ಬರುವ ನಿರೀಕ್ಷೆ ಇದೆ.

ದಕ್ಷಿಣ ಬೆಂಗಳೂರು ಭಾಗದಲ್ಲಿನ‌ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ಕಲಾವಿದ ಪ್ರಕಾಶ್ ಬೆಳವಾಡಿ (ಕಾಶ್ಮೀರ್ ಫೈಲ್ಸ್) ಇವೊತ್ತಿನ ಗಣ್ಯರಾಗಿ ಆಗಮಿಸಿ ಮೇಳಕ್ಕೆ ಕಳೆಕಟ್ಟಿದರು.ಉಳಿದಂತೆ ದಿನೇ ದಿನೇ ಸ್ವದೇಶಿ ಮೇಳ ಜನರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.

SureshBabu Public Next Bengaluru..

Edited By :
Kshetra Samachara

Kshetra Samachara

08/04/2022 03:32 pm

Cinque Terre

1.57 K

Cinque Terre

0

ಸಂಬಂಧಿತ ಸುದ್ದಿ