ದೊಡ್ಡಬಳ್ಳಾಪುರ: ನಗರದ ತ್ಯಾಜ್ಯ ನೀರು ಅರ್ಕಾವತಿ ನದಿಪಾತ್ರದ ಕೆರೆಗಳಿಗೆ ಸೇರಿ ಕೆರೆಗಳು ವಿಷವಾಗಿದೆ. ಕೆರೆಗಳ ಸಂರಕ್ಷಣೆ ಮುಂದಾಗಿರುವ ಗ್ರಾಮಸ್ಥರು ಹೋರಾಟದ ಹಾದಿ ತುಳಿದಿದ್ದಾರೆ.
ಅರ್ಕಾವತಿ ನದಿ ಪಾತ್ರದ ಕೆರೆಗಳಾದ ಚಿಕ್ಕತುಮಕೂರು, ತಿಪ್ಪಾಪುರ, ಮಜರಾಹೊಸಹಳ್ಳಿ ಮತ್ತು ದೊಡ್ಡತುಮಕೂರು ಕೆರೆಗಳ ರಕ್ಷಣೆಗಾಗಿ ಮುಂದಾಗಿರುವ ಗ್ರಾಮಸ್ಥರು ಇಂದು ಹೋರಾಟದ ಅಧ್ಯಕ್ಷರು ಮತ್ತು ವೈದ್ಯ ಡಾ.ಟಿ.ಎಚ್. ಆಂಜಿನಪ್ಪ ರವರ ನೇತೃತ್ವದಲ್ಲಿ ತಹಶೀಲ್ದಾರ್ ಮೋಹನಕುಮಾರಿ ಭೇಟಿ ಮಾಡಿ ಚರ್ಚೆ ನಡೆಸಲಾಯಿತು.
ರೈತರ ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಮೋಹನಕುಮಾರಿ ನೂತನ ನೀರು ಶುದ್ಧೀಕರಣ ಮಾಡಲು ತಾಲೂಕು ಆಡಳಿತ ಜಮೀನು ನೀಡಲು ತಕ್ಷಣ ಸಿದ್ಧವಿದೆ. ಈಗ ಆಗಿರುವ ಅನಾಹುತದ ಬಗ್ಗೆ ಜಿಲ್ಲಾಧಿಕಾರಿ, ಶಾಸಕರು, ನಗರಸಭೆ ಪೌರಾಯುಕ್ತರು, ಸಂಬಂಧಪಟ್ಟಂತ ಪಿಡಿಓಗಳ ಜೊತೆ ಮಾತನಾಡಲಾಗುವುದು.
ಮುಂದಿನವಾರ ಎಲ್ಲಾ ಅಧಿಕಾರಿಗಳು, ಇಂಜಿನಿಯರ್ ಗಳು, ಗ್ರಾಮಸ್ಥರು, ಕೈಗಾರಿಕಾ ಅಸೋಸಿಯೇಷನ್ ಹಾಗೂ ಶಾಸಕರನ್ನೊಳ್ಳಗೊಂಡ ಸಭೆ ಕರೆದು, ಸಭೆಯಲ್ಲಿ ಯಾವ ಸ್ಥಳದಲ್ಲಿ ನೂತನ ಪ್ಲಾಂಟ್ ನಿರ್ಮಾಣ ಮಾಡಬೇಕು, ಯಾವ ರೀತಿಯ ಪ್ಲಾಂಟ್ ನಿರ್ಮಿಸಬೇಕಿದೆ, ಮುಂದೆ ಯಾವ ರೀತಿಯಲ್ಲಿ ನೀರನ್ನು ಶುದ್ಧೀಕರಣ ಮಾಡಬೇಕು ಎಂಬುದರ ಸಾಧಕ ಬಾಧಕಗಳನ್ನು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಕೆರೆಗಳ ಉಳಿವಿಗಾಗಿ ಸೂಕ್ತ ರೀತಿಯಲ್ಲಿ ಎಚ್ಚರ ವಹಿಸಲಾಗುತ್ತದೆ ಎಂದರು.
Kshetra Samachara
08/02/2022 07:55 pm