ಬೆಂಗಳೂರು: ವಿಧಾನಸೌಧ ರಸ್ತೆಯ ಎಂಎಸ್ ಬಿಲ್ಡಿಂಗ್ ಕಚೇರಿ ಮುಂಭಾಗ ಸುಮಾರು ನಾಲ್ಕು ಅಡಿಗಳಷ್ಟು ರಾಜಕಾಲುವೆ ಕುಸಿದು ಅವಾಂತರ ಸೃಷ್ಟಿಯಾಗಿದೆ.
BWSSB ವತಿಯಿಂದ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಸುಮಾರು ನಾಲ್ಕು ಅಡಿಗಳಷ್ಟು ರಸ್ತೆಯ ಒಳಭಾಗದಲ್ಲಿ ಕುಸಿತ ಕಂಡಿದ್ದು,
ಬೃಹತ್ ಗಾತ್ರದ ಮರ ಕೂಡ ಬೀಳುವ ಆತಂಕ ಮೂಡಿದೆ.
ಸದ್ಯ, ಸಂಚಾರ ಪೊಲೀಸ್ರು ಬ್ಯಾರಿಕೇಡ್ ಅಳವಡಿಸಿದ್ದು ಮಾರ್ಗ ಬದಲಾವಣೆ ಮಾಡಿದ್ದಾರೆ. ಎಂಎಸ್ ಬಿಲ್ಡಿಂಗ್ ನಿಂದ ಸಿವೇಜ್ ವಾಟರ್ ಕಾಮಗಾರಿ ಇದಾಗಿದ್ದು, ಅಂಡರ್ ಗ್ರೌಂಡ್ ಯಂತ್ರದ ಮೂಲಕ ಕಾಮಗಾರಿ ನಡೆಯುತ್ತಿತ್ತು. ಈ ಹಿನ್ನೆಲೆ ವಿಧಾನ ಸೌಧದಿಂದ ನೃಪತುಂಗ ರಸ್ತೆ ವರೆಗೆ ಸ್ಲೋ ಮೂವಿಂಗ್ ಟ್ರಾಫಿಕ್ ಉಂಟಾಗಿತ್ತು.
Kshetra Samachara
05/09/2022 02:32 pm