ಬೆಂಗಳೂರು: ಲಾಲ್‌ಬಾಗ್ ಈಗ ಅಪ್ಪುಮಯವಾಗಿದ್ದು, ಸಸ್ಯಕಾಶಿಯಲ್ಲಿ ನಡೆಯುತ್ತಿರುವ ಫ್ಲವರ್ ಶೋ ಈಗ ಪವರ್ ಶೋ ಆಗಿ ಬದಲಾಗಿದೆ. ಅದರಲ್ಲೂ ನಗುವಿನ ಒಡೆಯನನ್ನ ಈ ಹೂವಿನ ಗುಡಿಯಲ್ಲಿ ನೋಡಲು ಜನಸಾಗರವೇ ಹರಿದು ಬರುತ್ತಿದೆ.ಹೀಗಿರೋವಾಗ ಅಪ್ಪು ಅಭಿಮಾನಿ ಒಬ್ಬರು ಎಂಟು ಕಿಲೋಮೀಟರ್ ಉದ್ದದ ಬಟ್ಟೆ ದಾರದಲ್ಲಿ ಪುನಿತ್ ರಾಜಕುಮಾರ್ ಅವರ ಚಿತ್ರ ಬಿಡಿಸಿದ್ದಾರೆ.
ಹೌದು. ಮೂಲತಃ ದಾವಣಗೆರೆಯ ಅಪ್ಪು ಅಭಿಮಾನಿಯಾದ ಪ್ರದೀಪ್, ತನ್ನ ನೆಚ್ಚಿನ ನಟನಿಗೆ ಗೌರವ ಸಲ್ಲಿಸಲು ಎಂಟು ಕಿಲೋಮೀಟರ್ ಉದ್ದದ ಬಟ್ಟೆ ದಾರದಲ್ಲಿ ಅಪ್ಪು ಚಿತ್ರ ಬಿಡಿಸಿ ಫ್ಲವರ್ ಶೋನಲ್ಲಿ ತಂದು ಇಟ್ಟಿದಾರೆ. ಪ್ರದೀಪ್ ಬರೀ ದಾರದ ಕಲೆ ಅಲ್ಲದೆ ಗ್ಲಾಸ್ ಕಲೆ ಮೂಲಕ ವರನಟ ರಾಜಕುಮಾರ್ ಚಿತ್ರ ಮತ್ತು ಅಪ್ಪು ಚಿತ್ರ ಬಿಡಿಸಿ ತಂದಿದ್ದಾರೆ.
ಆಗಸ್ಟ್ 15ರ ವರೆಗೆ ಲಾಲ್ ಬಾಗ್ ಫ್ಲವರ್ ಶೋ ನಲ್ಲಿ ಅಪ್ಪು ಅಭಿಮಾನಿ ಮಾಡಿರುವ ಈ ಚಿತ್ರವನ್ನು ಜನರ ವೀಕ್ಷಣೆಗೆ ಇಡಲಾಗಿದೆ. ನೀವು ಕೂಡ ಲಾಲ್‌ಬಾಗ್ ಫ್ಲವರ್ ಶೋಗೆ ಹೋಗಿ ಈ ಚಿತ್ರವನ್ನು ನೋಡಬಹುದು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
08/08/2022 06:53 pm