ಬೆಂಗಳೂರು: ನಗರದಲ್ಲಿ ದಿನೇ-ದಿನೇ ಅನುಮಾನಾಸ್ಪದ ಸಾವುಗಳು ಹೆಚ್ಚಾಗುತ್ತಿವೆ. ಹೀಗೆ ಕೆಂಗೇರಿಯ ಹರ್ಷಲೇಔಟ್‌ನಲ್ಲಿ 24 ವರ್ಷ ವಯಸ್ಸಿನ ನವೀನ್ ಎಂಬಾತನ ಶವವು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೂಲತಃ ಸಕಲೇಶಪುರದ ನವೀನ್, ಹಾಸನ ಹುಡುಗಿ ಪುಣ್ಯಾಳಾ ಜೊತೆ 8 ವರ್ಷದ ಹಿಂದೆಯೇ ಬಾಲ್ಯ ವಿವಾಹವಾಗಿದ್ದ. ಇವರು ಕೆಂಗೇರಿಯ ಹರ್ಷ ಲೇಔಟ್‌ನಲ್ಲಿ ವಾಸವಾಗಿದ್ರು. ಇವರಿಗೆ 4 ವರ್ಷದ ಮಗು ಸಹ ಇದೆ. ಕಾರು ಡ್ರೈವಿಂಗ್ ಮಾಡಿ ಹೆಂಡತಿ ಮಗುವಿನ ಜೊತೆ ನೆಮ್ಮದಿಯಿಂದ ಬಾಳ್ವೆ ಮಾಡ್ತಿದ್ರು. ಇವರ 8 ವರ್ಷದ ಸುಖಿ ದಾಂಪತ್ಯಕ್ಕೆ ಅದು ಯಾರ ಕರಿನೆರಳು ಬತ್ತೊ ಏನೊ ಗೊತ್ತಿಲ್ಲ.
ಈ ಒಂದು 1 ವರ್ಷದ ಹಿಂದೆ ಹೆಂಡತಿಗೆ ಅನೈತಿಕ ಸಂಬಂಧ ಇರೋದು ತಿಳಿದು ಬಂದಿದೆ. ಮದುವೆ ಆಗಿ 5 ವರ್ಷಕ್ಕೆ ಆಕೆ ಗಂಡನನ್ನ ಬಿಟ್ಟು ಪ್ರಿಯಕರನ ಜೊತೆ ಮಗುವನ್ನ ಕರೆದುಕೊಂಡು ಓಡಿ ಹೋಗಿದ್ದಾಳೆ. 8 ತಿಂಗಳ ಹಿಂದೆ ಇಬ್ಬರಿಗೂ ವಿಚ್ಛೇದನವಾಗಿತ್ತು. ಮತ್ತೆ ಹೊಸ ಜೀವನ ಮಾಡ್ತಿದ್ದ ನವೀನ್‌ಗೆ ಇತ್ತೀಚೆಗಷ್ಟೆ ಹೆಂಡತಿ ಪುಣ್ಯಾ ಕರೆ ಮಾಡದ್ಲಂತೆ. ಭೇಟಿಯಾಗು ಅಂದಿದ್ಲಂತೆ. ಭಾನುವಾರ ರಾತ್ರಿ ಚೆನ್ನಾಗಿ ಸ್ನೇಹಿತರ ಹತ್ತಿರ ಮಾತನಾಡಿಕೊಂಡು ಬಂದ ನವೀನ್ ಸೋಮವಾರ ನೇಣಿಗೆ ಶರಣಾಗಿದ್ದಾನೆ. ಆದರೆ ಇದು ಮನೆಯವರಿಗೆ ಅನುಮಾನ ಹುಟ್ಟಿಸಿದೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನೂ ಮರಣೋತ್ತರ ಪರೀಕ್ಷೆಗೆ ರಾಜರಾಜೇಶ್ವರಿ ಆಸ್ಪತ್ರೆಗೆ ಶವ ರವಾನೆಯಾಗಿದೆ.
PublicNext
02/08/2022 11:48 am