ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನದ ಕಾವೇರಮ್ಮನ ಹೆಮ್ಮೆಯ ಪುತ್ರ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್

ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಜೊತೆಗೆ ನಾವೇ ಸೇರಿಸಿರುವ ಪತ್ರಿಕಾರಂಗ. ಈ ನಾಲ್ಕು ಅಂಗಗಳು ಪ್ರಜಾಪ್ರಭುತ್ವದ ನಾಲ್ಕು ಅಂಗಗಳು. ಇದರಲ್ಲಿ ಶಾಸಕಂಗ ಕಾರ್ಯಾಂಗದ ಮೇಲೆ ಜನ ನಂಬಿಕೆ ಕಳೆದುಕೊಂಡು ದಶಕಗಳೇ ಕಳೆದಿವೆ. ಇನ್ನು ಕಾವಲು ನಾಯಿಯಂತೆ ಕೆಲಸ ಮಾಡಬೇಕಿದ್ದ ಪತ್ರಿಕಾರಂಗ ಸಾಕು ನಾಯಿಗಳಂತೆ ಬಾಲ ಆಡಿಸಿಕೊಂಡು ಮೂಲೆ ಸೇರಿಕೊಂಡಿವೆ. ಉಳಿದಿರುವುದು ನ್ಯಾಯಾಂಗ ಮೇಲಿನ ಮೂರು ಅಂಗಗಳು‌ ಸೇರಿದಂತೆ ನಮಗೆಲ್ಲ ಅಂದ್ರೆ ಜನರಿಗೆ ಒಂಚೂರು ಭಯ, ಭಕ್ತಿ, ನಂಬಿಕೆ ಅಂತ ಇರೋದು ನ್ಯಾಯಾಂಗದ ಮೇಲೆ ಮಾತ್ರ. ಅಂತಹ ನಂಬಿಕೆ ಇಮ್ಮಡಿಯಾಗುವಂತೆ ಕಳೆದ ನಾಲ್ಕೈದು ದಿನಗಳಿಂದ ಹೈಕೋರ್ಟ್‌ನಲ್ಲಿ ನಡೆದ ಬೆಳವಣಿಗೆ. ಒಬ್ಬರು ನ್ಯಾಯಾಧೀಶ ಮನಸ್ಸು ಮಾಡಿದ್ರೆ ಸಮಾಜದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಅನ್ನೋದಕ್ಕೆ ಕರ್ನಾಟಕದ ಬೆಳವಣಿಗೆ ಪ್ರಮುಖ ಉದಾಹರಣೆ. ಒಂದೇ ದಿನ ಒಬ್ಬ ಐಎಎಸ್ ಮತ್ತು ಐಪಿಎಸ್ ಅಧಿಕಾರಿ ಬಂಧನ.

ಪಿಎಸ್‌ಐ ಕೇಸ್‌ನಲ್ಲಿ ಎಡಿಜಿಪಿ ಅಮ್ರಿತ್ ಪೌಲ್ ಮೂರು ಬಾರಿ ವಿಚಾರಣೆ ನಡೆಸಿದ್ದರೂ ಸಿಗದ ಸಾಕ್ಷಿ ಒಬ್ಬ ನ್ಯಾಯಮೂರ್ತಿ ಗುಡುಗಿದ ನಂತರ ಸರ್ಕಾರಕ್ಕೆ(ಸಿಐಡಿಗೆ) ಸಿಕ್ಕಿದೆ. ಭ್ರಷ್ಟಾಚಾರ ಕೇಸ್‌ನಲ್ಲಿ ಅರೆಸ್ಟ್ ಆದ ಡಿಸಿ ಜೆ.‌ ಮಂಜುನಾಥ್ ಎರಡು ಬಾರಿ ವಿಚಾರಣೆ ನಡೆದರೂ ಸಿಗದ ಸಾಕ್ಷಿ ಅದೇ ನ್ಯಾಯಮೂರ್ತಿ ಅಧಿಕಾರಿಗಳಿಗೆ ಲೆಫ್ಟ್ ರೈಟ್ ತೆಗುದುಕೊಂಡಾಗ ಸಾಕ್ಷಿ ಸಿಕ್ಕಿ ಡಿಸಿ ಜೈಲು ಸೇರುದ್ರು. ಅಂದಹಾಗೆ ಈ ಎರಡು ಕೇಸ್ ಅಧಿಕಾರಿಗಳ ದುರಾದೃಷ್ಟಕ್ಕೋ ಜನರ ಅದೃಷ್ಟಕ್ಕೋ ಒಬ್ಬರೇ ನ್ಯಾಯಮೂರ್ತಿಗಳ ಬೆಂಚ್‌ಗೆ ಬಂದಿತ್ತು.

ಎಸ್ ಇವತ್ತು ಆ ನ್ಯಾಯಮೂರ್ತಿಗಳು ಯಾರೂ ಅಂತ ತುಂಬಾ ಜನ ಮಾತನಾಡ್ತಿದ್ದಾರೆ. ಅವರ ಹೆಸರು ಜಸ್ಟೀಸ್ ಹೆಚ್.ಪಿ ಸಂದೇಶ್, ಹೆತ್ತೂರು ಪುಟ್ಟಸ್ವಾಮಿಗೌಡ ಸಂದೇಶ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೇತ್ತೂರಿನಲ್ಲಿ 1964ರ ಡಿಸೆಂಬರ್ 2ರಂದು ಪುಟ್ಟಸ್ವಾಮಿಗೌಡ ಮತ್ತು ಕಾವೇರಮ್ಮ ಅವರ ಎರಡನೇ ಮಗನಾಗಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹೆತ್ತೂರು ಮತ್ತು ಸಕಲೇಶಪುರದಲ್ಲಿ ಪಡೆದು, ಸಕಲೇಶಪುರದ ಪ್ರೀ-ಯೂನಿವರ್ಸಿಟಿ ಸರ್ಕಾರಿ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ ಮುಗಿಸಿ ನಂತರ 1987ರಿಂದ 1992ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಎಂ. ಕೃಷ್ಣ ಕಾನೂನು ಕಾಲೇಜಿನಲ್ಲಿ 5 ವರ್ಷಗಳ ಕಾನೂನು ಪದವಿಯನ್ನು ಪಡೆದರು.

ಹಾಸನದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಕಾನೂನು ಎರಡರಲ್ಲೂ ಹಿರಿಯ ವಕೀಲರಾದ ಶ್ರೀ.ಕೆ.ಅನಂತರಾಮಯ್ಯ ಅವರೊಂದಿಗೆ ಅಭ್ಯಾಸವನ್ನು ಪ್ರಾರಂಭಿಸಿ 1994ರಲ್ಲಿ ಬೆಂಗಳೂರಿಗೆ ಬಂದು ತಮ್ಮ ಅಭ್ಯಾಸವನ್ನು ಬದಲಾಯಿಸಿದರು. ಸಂದೇಶ್ ಬೆಂಗಳೂರಿನ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಂಗದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಎರಡೂ ಕಡೆ ಅಭ್ಯಾಸ ಮಾಡಿದ್ದಾರೆ. ಇನ್ನೂ ಜಿಲ್ಲೆಯ ಹಲವು ಕಡೆ ಕೆಲಸ ಮಾಡಿರೋ ಇವ್ರು 2018 ರಲ್ಲಿಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಹುದ್ದೆಗೇರಿದ್ದಾರೆ.

Edited By : Vijay Kumar
PublicNext

PublicNext

06/07/2022 12:26 pm

Cinque Terre

17.71 K

Cinque Terre

0

ಸಂಬಂಧಿತ ಸುದ್ದಿ