ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇವನಹಳ್ಳಿಯ ಶಾಸನ ಸಂರಕ್ಷಕ ಗುರುಸಿದ್ದಯ್ಯ ಮೇಷ್ಟ್ರಿಂದ ದೇವಾಲಯ ಸಂರಕ್ಷಣೆ!

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಶಿಕ್ಷಕ ಗುರುಸಿದ್ದಯ್ಯ ದೇವಾಲಯ ಸಂರಕ್ಷಿಸೋ ಕೆಲಸ ಮಾಡಿದ್ದಾರೆ. ದೇವನಹಳ್ಳಿಯಲ್ಲಿ ಶಿಕ್ಷಕ ಸೇವೆಯಿಂದ ‌ನಿವೃತ್ತರಾದ ಗುರುಸಿದ್ದಯ್ಯ, ಹವ್ಯಾಸಿ ಶಾಸನ ಸಂರಕ್ಷಕರಾಗಿ ದೇವನಹಳ್ಳಿ & ಬೆಂಗಳೂರು ನಗರ & ಗ್ರಾಮಾಂತರ ಪ್ರದೇಶಗಳಲ್ಲಿ ‌ನೂರಕ್ಕು ಹೆಚ್ಚು ಶಾಸನ, ವೀರಗಲ್ಲು, ಮಾಸ್ತಿಗಲ್ಲು, ಶಿಲಾಶಾಸನ, ಶಿಲಾಯುಗದ ಕಲ್ಲಿನ‌ ಸಮಾಧಿ, ಪ್ರಾಗೈತಿಹಾಸದ ಶಾಸನ, ನಾಣ್ಯ, ದೇವಾಲಯಗಳನ್ನು ಸಂರಕ್ಷಿಸಿ ಇತಿಹಾಸದ ಸಾಕ್ಷ್ಯಾಧಾರಗಳನ್ನು ಉಳಿಸಿ ಕಾಪಾಡುತ್ತಿದ್ದಾರೆ.

ಇದೀಗ ಹೊಸದಾಗಿ ಪಾಳುಬಿದ್ದು, ಹತ್ತಾರು ವರ್ಷಗಳಿಂದ ನಾಶವಾಗಿದ್ದ ಸಮಾಧಿ ದೇವಾಲಯವೆಂಬ ವಿಶೇಷವಾದ ಇತಿಹಾಸದ ಪಳಿಯುಳಿಕೆಯನ್ನು ರಕ್ಷಿಸಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಬಿಟ್ಟಸಂದ್ರ ಗ್ರಾಮದ ಗುರುಸಿದ್ದಯ್ಯ ರವರು ಸ್ವಗ್ರಾಮಕ್ಕೆ ತೆರಳಿ ಶಾಸನ‌ ಪರಿಶೀಲಿಸಿದಾಗ ಪಕ್ಕದ ಎಣ್ಣೆಗೆರೆ ಗ್ರಾಮದಲ್ಲಿ ಸಮಾಧಿ ದೇವಾಲಯದ ಉಲ್ಲೇಖ ಗೊತ್ತಾಗಿದೆ.

ಕೂಡಲೇ ಎಣ್ಣೆಗೆರೆ ಗ್ರಾಮದ ಜನ ಮತ್ತು ಯುವಕರನ್ನು ಒಗ್ಗೂಡಿಸಿ ಎರಡು ಮೂರು ಗಂಟೆ ಮುಳ್ಳುಗಿಡ, ಪೊದೆಯನ್ನು ಸ್ವಚ್ಛಗೊಳಿಸಿದ್ದಾರೆ. ನಂತರ ದೇವಾಲಯವನ್ನು ನೀರಿನಿಂದ ‌ತೊಳೆದು ಸಂರಕ್ಷಿಸಿದ್ದಾರೆ.

ಭಾರತೀಯ ಪುರಾತತ್ವ ಇಲಾಖೆ & ಸರ್ಕಾರ ಮಾಡಬೇಕಾದ ಕೆಲಸವನ್ನು ಗುರುಸಿದ್ದಯ್ಯ ಮೇಷ್ಟ್ರು ತಮ್ಮ ಸ್ವಂತ ಖರ್ಚಿನಿಂದ ಓಡಾಡಿ ಮಾಡುತ್ತಿರುವುದು ಶ್ಲಾಘನೀಯ. ಇವರಿಂದ ಮತ್ತಷ್ಟು ಇತಿಹಾಸದ ಪಳಿಯುಳಿಕೆ ಮುಂದಿನ ಭವಿಷ್ಯಕ್ಕೆ ಸಿಗುವಂತಾಗಲಿ.

Edited By : Shivu K
Kshetra Samachara

Kshetra Samachara

26/06/2022 12:59 pm

Cinque Terre

2.46 K

Cinque Terre

0

ಸಂಬಂಧಿತ ಸುದ್ದಿ