ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆ್ಯಸಿಡ್ ಸಂತ್ರಸ್ತೆಗೆ ರಕ್ತದಾನ ಮಾಡಿದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು

ಬೆಂಗಳೂರು : ಆ್ಯಸಿಡ್ ಸಂತ್ರಸ್ತ ಯುವತಿಯ ಸರ್ಜರಿಗೆ ನೆರವಾಗುವ ಮೂಲಕ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಮಾದರಿಯಾಗಿದ್ದಾರೆ. ಸುಂಕದಕಟ್ಟೆಯಲ್ಲಿ ಪಾಗಲ್ ಪ್ರೇಮಿಯಿಂದ ಆ್ಯಸಿಡ್ ದಾಳಿಗೊಳಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಾಗಿರುವ ಯುವತಿಗೆ ಇತ್ತೀಚಿಗೆ ಸರ್ಜರಿಯಾಗಿದ್ದು ರಕ್ತದ ಅವಶ್ಯಕತೆ ಇತ್ತು. ವಿಷಯ ತಿಳಿದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಐದು ಯೂನಿಟ್ ರಕ್ತದಾನ ಮಾಡಿದ್ದಾರೆ.

ಇನ್ಸ್ಪೆಕ್ಟರ್ ಪ್ರಶಾಂತ್ ಸೇರಿದಂತೆ ಐವರು ಸಿಬ್ಬಂದಿಗಳು ರಕ್ತದಾನ ಮಾಡಿದ್ದು ಪ್ರಶಂಸೆಗೆ ಕಾರಣವಾಗಿದೆ.ಏಪ್ರಿಲ್ 28ರಂದು ಸುಂಕದಕಟ್ಟೆಯ ಮುತ್ತೂಟ್ ಮೈಕ್ರೋ ಫೈನಾನ್ಸ್ ಕಂಪನಿಯ ಸಮೀಪ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು.

Edited By : Nirmala Aralikatti
PublicNext

PublicNext

16/06/2022 08:13 pm

Cinque Terre

16.7 K

Cinque Terre

1

ಸಂಬಂಧಿತ ಸುದ್ದಿ