ಬೆಂಗಳೂರು: ಒಂದೂವರೆ ವರ್ಷದ ಮಗು ಹೆಚ್ಚಂದ್ರೆ ಅಮ್ಮ, ಅಪ್ಪ ಮಾಮ ಅನ್ನುತ್ತೆ. ಆದ್ರೆ ಇಲ್ಲೋಂದು ಮಗು ಮೋದಿ ಜೀ ಅಂತಿದೆ.
ಎಸ್ ಫೋಟೋದಲ್ಲಿ ಕಾಣ್ತಿರೋ ಮಗು ಹೆಸ್ರು ಸಿದ್ದಾಂತ್. ವಿದ್ಯಾರಣ್ಯಪುರದ ಶೈಲಜಾ ಮತ್ತು ರಾಮು ಅವರ ಪುಟ್ಟ ಕಂದ. ತನ್ನ ತಾಯಿ ಕೇಳುವ ಚಿಕ್ಕ ಚಿಕ್ಕ ಪ್ರಶ್ನೆಗಳಿಗೆ ಪಟ ಪಟ ಅಂತ ಉತ್ತರ ಕೊಡುವ ಈ ಕಂದ ಈ ದೇಶದ ಪ್ರಧಾನಿ ಯಾರು ಅನ್ನೋ ಪ್ರಶ್ನೆಗೆ ಮೋದಿ ಜೀ.. ಮೋದಿ ಜೀ ಅಂತ ತೊದಲು ನುಡಿಯಲ್ಲಿ ಉತ್ತರ ಕೊಡುತ್ತಿದೆ. ಈ ವೀಡಿಯೊ ಸದ್ಯ ಎಲ್ಲೆಡೆ ವೈರಲ್ ಆಗಿದೆ. ಮಗುವಿನ ಮಾತು ಕೇಳಿ ತಾಯಿ ಶೈಲಜಾ ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನು ಸಿದ್ದಾಂತ್ ಅಜ್ಜಿ ಸದಾ ನ್ಯೂಸ್ ನೋಡುವ ಹವ್ಯಾಸ ಹೊಂದಿದ್ದು, ಟಿವಿಯಲ್ಲಿ ಮೋದಿ ಬಂದಾಗ ಮಗುವಿಗೆ ಇವ್ರು ಇಂಡಿಯಾದ ಪ್ರೈಮ್ ಮಿನಿಸ್ಟರ್ ಅಂತ ಹೇಳಿಕೊಟ್ಟಿದ್ದಾರೆ. ತಾಯಿ ಶೈಲಜ ಮನೆಗೆ ಹೋದಾಗ ಸಾಮಾನ್ಯ ಪ್ರಶ್ನೆಗಳ ಜೊತೆ ಮಗುವನ್ನ who is the prime minister? ಎಂದು ಪ್ರಶ್ನಿಸಿದಾಗ ಪುಟ್ಟ ಕಂದ ಮೋದಿ ಜೀ ಅಂತ ಉತ್ತರಿಸಿದ್ದಾನೆ. ಈ ಕಂದ ತನ್ನ ಸದ್ಯ ತೊದಲು ನುಡಿಯ ಮೋದಿ ಜೀ.. ವಿಡಿಯೋ ಸಾಕಷ್ಟು ವೈರಲ್ ಆಗ್ತಿದ್ದು, ಪುಟ್ಟ ಕಂದನ ವಿಡಿಯೋ ಶೇರ್ ಮಾಡುತ್ತಿರುವ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ.
Kshetra Samachara
03/05/2022 07:42 pm