ಬೆಂಗಳೂರು: ಟ್ರಾಫಿಕ್ ಪೊಲೀಸ್ ಯುಗಾದಿ ಹಬ್ಬದ ದಿನ ದೇವರು ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ರಸ್ತೆಯಲ್ಲಿ ಮಾನಸಿಕ ಅಸ್ವಸ್ಥನ ನೆರವಿಗೆ ನಿಂತ ಪಿಎಸ್‌ಐ ಸುರೇಂದ್ರ ಮಾನವೀಯತೆ ಮೆರೆದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಾನಸಿಕ ಅಸ್ವಸ್ಥನಿಗೆ ಹೊಸ ಬಟ್ಟೆ ತೊಡಿಸಿ, ಊಟಕ್ಕೆ ಹಣ ಕೊಟ್ಟು ಕಳಿಸಿದ ಸಂಚಾರಿ ಪಿಎಸ್ ಐ ಸುರೇಂದ್ರ ಮಾನವೀಯತೆ ತೋರಿದ್ದಾರೆ. ನಾಗವಾರ ಜಂಕ್ಷನ್ ಬಳಿ ಊಟ ಬಟ್ಟೆ ಇಲ್ಲದೆ ಪರದಾಡುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಕಂಡು ಮರಿಗಿದ ಕೆಜಿಹಳ್ಳಿ ಸಂಚಾರ ಪಿಎಸ್‌ಐ ಸುರೇಂದ್ರ
ಆತನಿಗೆ ಸ್ವತಃ ಬಟ್ಟೆ ತೊಡಿಸಿದ್ದಾರೆ. ಸುರೇಂದ್ರ ಕೆ.ಜಿ ಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಸುರೇಂದ್ರ ಕಾರ್ಯಕ್ಕೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
PublicNext
03/04/2022 10:20 pm