ಬೆಂಗಳೂರು : ಪ್ರತಿಯೊಬ್ಬರ ಜೀವನದ ಅಧ್ಬುತ ದಿನ ಯಾವುವು ಅಂದರೆ ಎಲ್ಲರೂ ಹೇಳೋದು ಶಾಲೆ & ಕಾಲೇಜು ದಿನಗಳನ್ನು. ಹೌದು ಇಲ್ಲಿ ಒಂದು ಗುಂಪು 24ವರ್ಷಗಳ ನಂತರ ಮತ್ತೆ ಒಂದಾಗಿ ಕಾಲೇಜ ಡೇಸ್ ನ ಸವಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಆ ಮೂಲಕ ಎಲ್ಲಾ ಸಂಬಂಧಗಳಿಗಿಂತ ಶ್ರೇಷ್ಠವಾದದ್ದು ಸ್ನೇಹ ಸಂಬಂಧ ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ.
ಬೆಂಗಳೂರಿನ ಆನಂದ್ ರಾವ್ ಸರ್ಕಲ್ ನಲ್ಲಿರುವ ಶ್ರೀಜಗದ್ಗುರು ರೇಣುಕಾಚಾರ್ಯ ಕಾಲೇಜಿನ 1995-98ರ ಸಾಲಿನ ಡಿಗ್ರಿ ಕ್ಲಾಸ್ಮೆಟ್ಸ್ ರೀ ಯುನೈಟ್ ಆಗಿರುವ ಫ್ರೆಂಡ್ಸ್. ಡಿಗ್ರಿ ಮುಗಿದ ಮೇಲೆ ಕೆಲಸ, ಮದುವೆ, ಸಂಸಾರ ಜಂಜಾಟದ ಜೊತೆಗೆ ಸಂಪರ್ಕದಲ್ಲಿದಲ್ಲಿದ್ದುಕೊಂಡುವ್ಯಾಟ್ಸಾಪ್ ಗ್ರೂಪ್ ಮೂಲಕ ನಿರಂತರ ಸಂಪರ್ಕದಲ್ಲಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣಾಂತರಗಳಿಂದ ಒಂದ್ಕಡೆ ಸೇರಲು ಆಗಿರಲಿಲ್ಲ.ಸದ್ಯ ReUnited ಹೆಸರಲ್ಲಿ ಎಲ್ಲಾ ಫ್ರೆಂಡ್ಸ್ ಒಟ್ಟಿಗೆ ಸೇರಿ ಸ್ನೇಹಸಾಗರದಲ್ಲಿ ವಿಹರಿಸಿ ಉಂಡು ಹಾಡಿ ಸಂಭ್ರಮಿಸಿದ್ದಾರೆ.
ಒಟ್ಟಾರೆ ರೀ ಯನೈಟೆಡ್ ಗ್ರೂಪ್ ನ ಕಾರ್ಯಕ್ರಮ ಸಂಬಂಧಗಳ ಬೆಸುಗೆಗೆ, ಬಾಂಧವ್ಯಗಳ ಸಮ್ಮಿಲನಕ್ಕೆ ಸಾಕ್ಷಿಯಾಯ್ತು.
Kshetra Samachara
15/03/2022 10:27 pm