ದೊಡ್ಡಬಳ್ಳಾಪುರ :ಲೋಕಸೇವಾನಿರತ ಕೊಂಗಾಡಿಯಪ್ಪನವರ 162ನೇ ಜನ್ಮದಿನಾಚರಣೆ ಇಂದು, ದೊಡ್ಡಬಳ್ಳಾಪುರ ನೇಕಾರಿಕೆಯ ನಗರವಾಗಲು ಪ್ರಮುಖ ಕಾರಣಕರ್ತರು ಕೊಂಗಾಡಿಯಪ್ಪ ಅವರ ಶ್ರಮದ ಫಲದಿಂದ ದೊಡ್ಡಬಳ್ಳಾಪುರಕ್ಕೆ 1932 ರಲ್ಲಿ ವಿದ್ಯುತ್ ಸಂಪರ್ಕ ಪಡೆಯಿತು, ಇದರಿಂದ ನಗರದಲ್ಲಿ ವಿದ್ಯುತ್ ಮಗ್ಗಗಳಿಂದ ನೇಕಾರಿಕೆ ಪ್ರಾರಂಭವಾಗಿ ವಾಣಿಜ್ಯ ನಗರವಾಗಿಯು ಬೆಳೆಯಿತು.
ಮೈಸೂರು ಮಹಾರಾಜರಿಂದ ಲೋಕಾಸೇವಾನಿರತ ಗೌರವಕ್ಕೆ ಪಾತ್ರರಾದವರು ಕೊಂಗಾಡಿಯಪ್ಪನವರು, ದೊಡ್ಡಬಳ್ಳಾಪುರಕ್ಕೆ ಸರ್ಕಾರಿ ಜೂನಿಯರ್ ಕಾಲೇಜ್, ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆ, ಪಶು ಆಸ್ಪತ್ರೆಯನ್ನ ತಂದವರು ಹಾಗೆಯೇ ಮೈಸೂರು ಪ್ರಾಂತ್ಯದಲ್ಲಿ ವಿದ್ಯುಚ್ಛಕ್ತಿ ಪಡೆದ ಎರಡನೇ ತಾಲೂಕು ಹೆಗ್ಗಳಿಕೆ ಪಡೆಯಲು ಸಹ ಕೊಂಗಾಡಿಯಪ್ಪನವರ ಪಾತ್ರ ದೊಡ್ಡದು.
ಮಿರ್ಜಾ ಇಸ್ಮಾಯಿಲ್ ಮೈಸೂರಿನ ದಿವಾನ್ ಆಗಿದ್ದ ಅವಧಿಯಲ್ಲಿ ಕೊಂಗಾಡಿಯಪ್ಪ ನವರು ಪುರಸಭೆಯ ಪ್ರಪ್ರಥಮ ಅಧ್ಯಕ್ಷರಾಗಿದ್ದರು, ಮಿರ್ಜಾರವರೊಂದಿಗೆ ಸ್ನೇಹ ಸಂಬಂಧಿಸಿದ ಅವರು 1932 ರಲ್ಲಿ ದೊಡ್ಡಬಳ್ಳಾಪುರಕ್ಕೆ ವಿದ್ಯುಚ್ಛಕ್ತಿ ಬರುವಂತೆ ಮಾಡಿದರು, ನಗರದ ರುಮಾಲೆಛತ್ರದ ಬಳಿಯ ಗಣೇಶ ಗುಡಿಯಲ್ಲಿ ಮೊಟ್ಟ ಮೊದಲ ವಿದ್ಯುತ್ ದೀಪ ಬೆಳಗಿತು.
ದೊಡ್ಡಬಳ್ಳಾಪುರಕ್ಕೆ ವಿದ್ಯುತ್ ಸಂಪರ್ಕ ಬಂದ ತಕ್ಷಣವೇ ಕೈಮಗ್ಗಗಳ ಬದಲು ವಿದ್ಯುತ್ ಮಗ್ಗ ಬಂದವು, 60 ವರ್ಷಗಳ ಹಿಂದೆಯೇ ದೊಡ್ಡಬಳ್ಳಾಪುರ ನಗರದಲ್ಲಿ ವಿದ್ಯುತ್ ಮಗ್ಗಗಳು ಮರೆಯಾದವು, ರೇಷ್ಮೆ ಬಟ್ಟೆಯ ನೇಕಾರಿಕೆಯಿಂದ ದೊಡ್ಡಬಳ್ಳಾಪುರದ ಚಿತ್ರಣವೇ ಬದಲಾಯಿತು, ವಾಣಿಜ್ಯ ನಗರವಾಗಿ ಬೆಳೆದ ದೊಡ್ಡಬಳ್ಳಾಪುರ ಇಂದು ರೇಷ್ಮೆ ನಗರಿ ಎಂದು ಕರೆಯಲಾಗುತ್ತಿದೆ.
ಇಂದು ಇಲ್ಲಿ 35 ಸಾವಿರಕ್ಕೂ ಹೆಚ್ಚು ವಿದ್ಯುತ್ ಮಗ್ಗಗಳಿವೆ. ದೊಡ್ಡಬಳ್ಳಾಪುರ ನಗರದ ಅಭಿವೃದ್ಧಿಗೆ ಶ್ರಮಿಸಿದ ಕೊಂಗಾಡಿಯಪ್ಪನವರ ಸ್ಮರಣೆಗಾಗಿ 25 ಲಕ್ಷ ಹಣವನ್ನು ನಗರಸಭೆ ಮಿಸಲಿಟ್ಪಿದೆ, ನೂತನ ನಗರಸಭೆ ಕಟ್ಟಡದ ಮುಂದೆ ಕೊಂಗಾಡಿಯಪ್ಪ ಪುತ್ಥಳಿ ನಿರ್ಮಾಣ, ಕೊಂಗಾಡಿಯಪ್ಪ ನಗರ ನಾಮಾಕರಣಕ್ಕೆ ಅಂಗೀಕರಿಸಲಾಗಿದೆ.
Kshetra Samachara
23/02/2022 12:41 pm