ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: 'ಹಳ್ಳಿಮಕ್ಕಳ ಡೆಲ್ಲಿ ಸಾಧನೆ'

ಯಲಹಂಕ: ಬಲಿಷ್ಠ ಮಾಂಸಖಂಡಗಳಿಂದ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಯ. ದೇಶ ಕಟ್ಟುವ ಕಾರ್ಯದಲ್ಲಿ ಯುವಜನತೆ ಪಾತ್ರ ಅಪಾರ. ಹೀಗೆ ಉತ್ತಮ ತರಬೇತಿ ಮತ್ತು ಬದ್ಧತೆಯ ಯಲಹಂಕಾದ ಒಂದು ಕ್ರೀಡಾ ತಂಡ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಬೆಂಗಳೂರಿನ ಯಲಹಂಕ ತಾಲ್ಲೂಕಿನ ಬಾಗಲೂರಿನ ಸುಮನ್ ಚಿರಾಯು ಅಥ್ಲೆಟಿಕ್ಸ್ ಅಕಾಡೆಮಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಇಲ್ಲಿ 5ರಿಂದ 25 ವರ್ಷ ವಯಸ್ಸಿನ ಬಾಲಕ- ಬಾಲಕಿಯರು ತರಬೇತಿ ಪಡೆದು ರಾಜ್ಯ, ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಬಹುಮಾನಗಳ ಕೊಳ್ಳೆ ಹೊಡೆದಿದ್ದಾರೆ. ಇಂತಹ ಪ್ರಶಸ್ತಿ ವಿಜೇತ ಕ್ರೀಡಾ ಪಟುಗಳನ್ನು ಬಾಗಲೂರಿನ ಗ್ರಾಮಸ್ಥರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಪದಕ ಪ್ರಶಸ್ತಿ ಪತ್ರ ವಿತರಿಸಿ ಸನ್ಮಾನಿಸಿದರು.

ಬೆಂಗಳೂರು ಕೋಲಾರ, ಭಾಗಗಳ ಮಕ್ಕಳು ಸುಮನ್ ಚಿರಾಯು ಅಕಾಡೆಮಿಲಿ ಅಥ್ಲೆಟಿಕ್ಸ್ ತರಬೇತಿ ಪಡೆಯುತ್ತಿದ್ದಾರೆ. ರಾಮನಗರ, ಗದಗ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಜೂನಿಯರ್, ಸಬ್ ಜೂನಿಯರ್ ಕ್ರೀಡಾಕೂಟ, ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ಜೂನಿಯರ್ ಮತ್ತು ಸೀನಿಯರ್ ಕ್ರೀಡಾಕೂಟದಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. 10,14,17, ಮತ್ತು 20 ವರ್ಷ ವಯಸ್ಸಿನ ಬಾಲಕ/ ಬಾಲಕಿಯರು ಎಲ್ಲಾ ಅಥ್ಲೆಟಿಕ್ಸ್ ವಿಭಾಗಗಳಲ್ಲಿ 23 ಚಿನ್ನ, 19 ಬೆಳ್ಳಿ ಹಾಗೂ 2 ಕಂಚಿನ ಪದಕ ಗಳಿಸಿದ್ದಾರೆ.

ಗ್ರಾಮೀಣ ಭಾಗದ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಸುಮನ್ ಚಿರಾಯು ಅಥ್ಲೆಟಿಕ್ಸ್ ಅಕಾಡೆಮಿ ತರಬೇತಿ ನೀಡುತ್ತಿದೆ. ಅಂತರರಾಷ್ಟ್ರಿಯ ಕ್ರೀಡಾಪಟು ಭರತ್‌ ಅವರ ತರಬೇತಿಯಲ್ಲಿ ಮಕ್ಕಳು ಅತ್ಯುತ್ತಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಹರಿಯಾಣದ ಕ್ರೀಡಾಕೂಟದಲ್ಲಿ 21 ಚಿನ್ನ, 19 ಬೆಳ್ಳಿ, 2 ಕಂಚು ಪದಕ ಗೆದ್ದು, ಚಾಂಪಿಯನ್ಸ್ ಆಗಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.

ಮಕ್ಕಳಿಗೆ ಅತ್ಯುತ್ತಮ ದೈಹಿಕ ಶಿಕ್ಷಣ ದೊರೆತರೆ ದೇಶ ವಿದೇಶ ಸಾಮರ್ಥ್ಯ ತೋರಲು ಸಾಧ್ಯವಾಗುತ್ತದೆ. ಅಂತಹ ತರಬೇತಿಯಿಂದ ಒಲಿಂಪಿಕ್ಸ್‌ ರೀತಿಯ ಕ್ರೀಡಾಕೂಟಗಳಲ್ಲಿ ಭಾರತಕ್ಕೆ ಅತಿ ಹೆಚ್ಚು ಪಕದ ಸಿಗುವಂತಾಗಲಿ.

ಸುರೇಶ್‌ಬಾಬು ಪಬ್ಲಿಕ್ ನೆಕ್ಸ್ಟ್‌, ಯಲಹಂಕ

Edited By : Shivu K
PublicNext

PublicNext

21/02/2022 09:32 am

Cinque Terre

44.83 K

Cinque Terre

0

ಸಂಬಂಧಿತ ಸುದ್ದಿ