ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾನಂಗಳದಲ್ಲಿ ಮೂಡಿದ ಅಪರೂಪದ ಚಮತ್ಕಾರಿ ಬೆಳಕು !

ದೇವನಹಳ್ಳಿ: ಆಕಾಶದಲ್ಲಿ ಅಪರೂಪ ಬೆಳಕಿನ ರೂಪ ಕಂಡಿದ್ದು, ಅರ್ಧ ಗಂಟೆಗೂ ಹೆಚ್ಚು ಸಮಯ ಆಕಾಶದಲ್ಲಿ ಮೂಡಿದ ವಿಸ್ಮಯ ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ.

ದೇವನಹಳ್ಳಿ ತಾಲೂಕಿನ ಕೊಯಿರಾ ಗ್ರಾಮದಲ್ಲಿ ಇಂದು ಮುಂಜಾನೆ ಸುಮಾರು 5.45 ಸಮಯದಲ್ಲಿ ಆಕಾಶದಲ್ಲಿ ಬೆಳಕಿನ ಗೆರೆಯ ಚಿತ್ತಾರ ಮೂಡಿ ಅಚ್ಚರಿ ಮೂಡಿಸಿದೆ.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಆಗಸದಲ್ಲಿ ಪ್ರಜ್ವಲಗೊಂಡ ಬೆಳಕು ಗ್ರಾಮಸ್ಥರ ಕುತೂಹಲಕ್ಕೆ ಕಾರಣವಾಗಿದೆ. ಆಗಸದಲ್ಲಿ ಕಾಣಿಸಿಕೊಂಡ ಬೆಳಕಿನ ಚಿತ್ತಾರದ ಬಗ್ಗೆ ಗ್ರಾಮಸ್ಥರಲ್ಲಿ ಆತಂಕ ಮತ್ತು ಗೊಂದಲ ಸಹ ಇದೆ. ಸೂರ್ಯ ಉದಯವಾದ ಮೇಲೆ ಈ ಅಪರೂಪದ ಬೆಳಕು ಮರೆಯಾಗಿದೆ.

Edited By :
Kshetra Samachara

Kshetra Samachara

14/02/2022 09:09 am

Cinque Terre

896

Cinque Terre

0

ಸಂಬಂಧಿತ ಸುದ್ದಿ