ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕ ವಾಯುನೆಲೆಗೆ ಬಂದ ವರುಣ್ ಸಿಂಗ್ ಪಾರ್ಥಿವ ಶರೀರ: ಶುಕ್ರವಾರ ಅಂತಿಮ ಸಂಸ್ಕಾರ

ಬೆಂಗಳೂರು: ತಮಿಳುನಾಡಿನಲ್ಲಿ ಹೆಲಿಕ್ಯಾಪ್ಟರ್ ದುರಂತದಲ್ಲಿ CDS ಬಿಪಿನ್ ರಾವತ್ ಸೇರಿದಂತೆ 13ಜನ‌ ದುರಂತ ಅಂತ್ಯಕಂಡಿದ್ದರು.. ಬದುಕುಳಿದಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಗೆ ಬೆಂಗಳೂರಿನ ಕಮ್ಯಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು ಪಲಕಾರಿಯಾಗಿರಲಿಲ್ಲ.. ಅವರು ಸಹ ನೆನ್ನೆ ಇಹಲೋಕ‌ ತ್ಯೇಜಿಸಿದರು.. ಇಂದು ಪಾರ್ಥಿವ ಶರೀರ ಯಲಹಂಕ ವಾಯುನೆಲೆಗೆ ಬೆಳಗ್ಗೆ 10-30ಕ್ಕೆ ಆಗಮಿಸಿತು..ಅರ್ದಗಮಟೆಯಲ್ಲಿ ಸಕಲ ಗೌರವ ಸಲ್ಲಿಸಲಾಯಿತು.. 11-45 ಕ್ಕೆ ಯುದ್ಧ ವಿಮಾನದಲ್ಲಿ ಸಕಲ ಗೌರವಗಳೊಂದಿಗೆ ಭೂಪಾಲ್ ನತ್ತ ವರುಣ್ ಸಿಂಗ್ ಪಾರ್ಥಿವ ಶರೀರ ತೆರಳಿತು.. ರಾಜ್ಯಪಾಲರು, ವಾಯುಸೇನೆಯ ಹಿರಿಯ ಅಧಿಕಾರಿಗಳು, ಕುಟುಂಬದವರಿಂದ ವರುಣ್ ಸಿಂಗ್ ಗೆ ಗೌರವ ಸಮರ್ಪಿಸಲಾಯಿತು..

ಯಲಹಂಕ ವಾಯುನೆಲೆಗೆ ರಾಜ್ಯಪಾಲರಾದ ತಾವರಚಂದ ಗೆಹ್ಲೋಟ್ 11ಕ್ಕೆ ಆಗಮಿಸಿ ಗೌರವ ಸಮರ್ಪಿಸಿದರು.. ವಾಯಸೇನೆಯ ಹಿರಿಯ ಅಧಿಕಾರಿಗಳು ಮತ್ತು ವರುಣ್ ಸಿಂಗ್ ಕುಟುಂಬದ ಸದಸ್ಯರು ಗೌರವ ಸಲ್ಲಿಸಿದರು.ಶುಕ್ರವಾರ ಭೂಪಾಲ್ ನಲ್ಲಿ ವರುಣ್ ಸಿಂಗ್ ಪಾರ್ಥಿವ ಶರೀರದ ಅಂತಿಮ ವಿಧಿವಿಧಾನ‌ ನೆರವೇರಲಿದೆ..

Edited By : Manjunath H D
Kshetra Samachara

Kshetra Samachara

16/12/2021 01:19 pm

Cinque Terre

1.13 K

Cinque Terre

0

ಸಂಬಂಧಿತ ಸುದ್ದಿ