ಬೆಂಗಳೂರು: ಕೇವಲ 10 ವರ್ಷ. ಹೌದು 10 ವರ್ಷದ ಹುಡ್ಗ ಜೇಡ ಬಲೆ ಹೆಣೆಯೋ ಫೋಟೋಗ್ರಾಫಿ ಮಾಡಿದ್ದಾನೆ. ಇದು ನಿಜಕ್ಕೂ ಕಲರ್ ಪುಲ್ ಆಗಿದೆ. ಅಷ್ಟೇ ಆಕರ್ಷಕವಾಗಿಯೂ ಇದೆ.ಈಗ ಇದಕ್ಕೆ ಅತಿ ಕಿರಿಯ Wildlife Photographer ಅವಾರ್ಡ್ ಕೂಡ ಬಂದಿದೆ.
ವಿದ್ಯುನ್ ಆರ್. ಹೆಬ್ಬಾರ್ ಆ ಹುಡ್ಗನ ಹೆಸರು. ಇನ್ನೂ 10 ವರ್ಷ. ಈಗಲೇ ಫೋಟೋಗ್ರಾಫಿಯ ಹವ್ಯಾಸ ಇದೆ. ಅದೆಲ್ಲಿ ನೋಡಿದ್ದನೋ ಏನೋ. ಜೇಡ ಬಲೆ ಕಟ್ಟೋದನ್ನ ಕಂಡಿದ್ದಾನೆ. ಕಂಡು ತನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾನೆ. ಆ ಫೋಟೋ ಈಗ ಅತಿ ಹೆಚ್ಚು ಗಮನ ಸೆಳೆದಿದೆ. ಅತಿ ಕಿರಿಯ Wildlife Photographer ಅನ್ನೋ ಪ್ರಶಸ್ತಿಯನ್ನೂ ತಂದುಕೊಟ್ಟಿದೆ.
Kshetra Samachara
14/10/2021 08:21 pm