ಬೆಂಗಳೂರು; ನಾಯಿಗಳು ಮಾನವನ ಉತ್ತಮ ಸ್ನೇಹಿತ ಅನ್ನೋ ಮಾತಿದೆ. ಅದೇ ರೀತಿ ಶ್ವಾನಗಳು ಅದೆಷ್ಟೋ ಮನೆಯಲ್ಲಿ ಕುಟುಂಬದ ಸದಸ್ಯರಂತೆ ಬದುಕಿರುವುದನ್ನ ನೋಡಿರುತ್ತೇವೆ. ಅಷ್ಟೇ ಯಾಕೆ ಪೊಲೀಸ್ ಇಲಾಖೆಯಲ್ಲಿಯೂ ಶ್ವಾನಗಳನ್ನ ನೋಡುತ್ತೇವೆ .ಹಲವು ಬಾರಿ ಕಷ್ಟಕರ ಪ್ರಕರಣವನ್ನು ನಿಭಾಯಿಸಲು ಸಹಾಯ ಮಾಡಿರುವುದನ್ನ ಕೂಡ ಕೇಳಿದ್ದೀವಿ. ಆದರೆ ನೀವು ಎಂದಾದರೂ ಬಿಬಿಎಂಪಿ ಸಿಬ್ಬಂದಿ ಹೊಂದಿರುವ ನಾಯಿಯನ್ನು ನೋಡಿದ್ದೀರಾ?
ಹೌದು , ನೀವು ಇದನ್ನು ನಂಬಲೇಬೇಕು. ಇಲ್ಲೊಂದು ಬೀದಿ ನಾಯಿ ಬಿಬಿಎಂಪಿ ಟ್ಯಾಕ್ಟರ್ ಹಿಂದೆ ಓಡುತ್ತದೆ. ಟ್ಯಾಕ್ಟರ್ ನ ಸಿಬ್ಬಂದಿಯೊಂದಿಗೆ ಪ್ರತಿದಿನ ಶ್ವಾನ ಆಹಾರ ಸೇವಿಸುತ್ತದೆ.ಅವರ ಜೊತೆಯಲ್ಲೇ ಮಲಗುತ್ತದೆ. ಇಂತಹ ಅಪರೂಪದ ದೃಶ್ಯ ಕಂಡುಬಂದಿದ್ದು ಬಿಬಿಎಂಪಿಯ ವಾರ್ಡ್ ಸಂಖ್ಯೆ 176 ಕಚೇರಿಯಲ್ಲಿ.
ಮೊದಮೊದಲು ಈ ಶ್ವಾನ ಹೀಗೆ ಟ್ರಾಕ್ಟರ್ ಹಿಂದೆ ಓಡಿ ಬಂದಾಗ ಬಿಬಿಎಂಪಿ ಸಿಬ್ಬಂದಿಗಳು ಕೋಪಗೊಳ್ಳುತ್ತಿದ್ದರು. ಹಲವು ಬಾರಿ ಇದನ್ನ ಓಡಿಸಲು ಪ್ರಯತ್ನಿಸಿದರೂ ಈ ಶ್ವಾನ ಮಾತ್ರ ಟ್ರಾಕ್ಟರ್ ಹಿಂದೆ ಓಡುವುದನ್ನ ಬಿಡಲೇ ಇಲ್ಲವಂತೆ.
ದಿನಕಳೆದಂತೆ ಈ ಶ್ವಾನ ಸಿಬ್ಬಂದಿಗಳಿಗೆ ಹತ್ತಿರವಾಗುತ್ತಾ ಬಂದಿತು. ಅಲ್ಲಿಂದ ಪ್ರತಿದಿನ ಅದೆಷ್ಟೇ ಟ್ರಾಕ್ಟರ್ ಕಿಲೋಮೀಟರ್ ಸಂಚರಿಸಿದರು ಈ ಶ್ವಾನದ ಓಟ ನಿಲ್ಲುತ್ತಲೇ ಇರಲಿಲ್ಲವಂತೆ.ಇದೀಗ ಎಷ್ಟರ ಮಟ್ಟಿಗೆ ಇವರ ಸಂಬಂಧ ಇದೆ ಅಂದ್ರೆ ಪ್ರತಿ ದಿನ ಬೆಳಗ್ಗೆ ಬಿಬಿಎಂಪಿ ಸಿಬ್ಬಂದಿ ಕೆಲಸ ಆರಂಭಿಸಿದಾಗ ನಾಯಿ ಟ್ಯಾಕ್ಟರ್ ಹಿಂದೆ ಓಡುತ್ತದೆ ಮತ್ತು ಅವರು ಮನೆಗೆ ಹಿಂದಿರುಗುವವರೆಗೂ ಶ್ವಾನ ಸಿಬ್ಬಂದಿಗಳ ಜೊತೆಯಲ್ಲೇ ಇರುತ್ತದೆ. ನಾಯಿಯ ನೀಯತ್ತು ಅಂದ್ರೆ ಇದೇ ಇರಬೇಕು ನೋಡಿ. ಈ ವಾರ್ಡಿನ ಜನರೂ ಕೂಡ ಶ್ವಾನ ಮತ್ತು ಬಿಬಿಎಂಪಿ ಸಿಬ್ಬಂದಿಗಳ ಗೆಳೆತನ ನೋಡಿ ಆಶ್ಚರ್ಯ ಪಡುವಂತಾಗಿದೆ.
ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
21/03/2022 10:29 pm