ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೆಸ್ಕಾಂ ವಿರುದ್ಧ ಮಲ್ಲೇಶ್ವರಂ ನಿವಾಸಿಗಳ ಆಕ್ರೋಶ

ರಿಪೋರ್ಟ್- ರಂಜಿತಾಸುನಿಲ್

ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಯಶವಂತಪುರ, ಶರೀಫ್ ನಗರದಲ್ಲಿ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ವಿದ್ಯುತ್ ತಂತಿ 12ವರ್ಷದ ರುಕ್ಮಾನ್ ಮೇಲೆ ಬಿದ್ದಿದರಿಂದ ವಿದ್ಯುತ್ ಪ್ರವಹಿಸಿ ಸಾವು ಸಂಭವಿಸಿದ ಹಿನ್ನಲೆ, ಇದರ ವಿರುದ್ದ ಮಲ್ಲೇಶ್ವರಂ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ರು. ಇದರ ಸಮಾಜ ಸೇವಕರಾದ ಅನೂಪ್ ಅಯ್ಯಂಗಾರ್ ರವರು ಶರೀಫ್ ನಗರ ನಿವಾಸಿಗಳು ಸಮಸ್ಯೆಗಳ ವಿರುದ್ದ ಮೌನ ಪ್ರತಿಭಟಿಸಿದ್ರು.

ಸಾಮಾಜಿಕ ಕಾರ್ಯಕರ್ತ ಅನೂಪ್ ಅಯ್ಯಂಗಾರ್ ಮಾತನಾಡಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಗುಂಡಿಯಲ್ಲಿ ಬೀಳಬೇಕು ಅಥವಾ ಕರೆಂಟ್ ಹೊಡೆದು ಜನರ ಸಾಯಬೇಕು ಎಂಬ ಪರಿಸ್ಥಿತಿ ಬಂದಿದೆ. ಶರೀಫ್ ನಗರ ಸ್ಲಂ ಪ್ರದೇಶವಾಗಿದ್ದು ಸಾವಿರಾರು ಜನರು ಇಲ್ಲಿ ವಾಸವಿದ್ದಾರೆ.ಒಂದೊಂದು ವಿದ್ಯುತ್ ಕಂಬದಲ್ಲಿ ಹಲವಾರು ಮನೆಗಳ ಸಂಪರ್ಕವಿದೆ. ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳಿಗೆ ಮತ್ತು ಬೆಸ್ಕಾಂನವರಿಗೆ ಹಲವಾರು ಬಾರಿ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಸುರಿದು ಮಳೆಯಿಂದ ವಿದ್ಯುತ್ ತಂತಿ ಕಟ್ಟಾಗಿ ಬಾಲಕನ ತಲೆ ಮೇಲೆ ಬಿದ್ದು ವಿದ್ಯುತ್ ಪ್ರವಹಿಸಿ ಸಾವು ಸಂಭವಿಸಿದೆ.

ಜನಪ್ರತಿನಿಧಿಗಳ ಮತ್ತು ಬೆಸ್ಕಾಂರವರ ನಿರ್ಲಕ್ಷ್ಯದಿಂದ ಈ ದುರಂತ ಸಾವು ಸಂಭವಿಸಿದೆ. ಮೃತಪಟ್ಟ ಕುಟುಂಬದವರಿಗೆ ಸೂಕ್ತ ಪರಿಹಾರ ಕೊಡಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಒತ್ತಾಯ ಎಂದು ಹೇಳಿದರು.

Edited By : PublicNext Desk
Kshetra Samachara

Kshetra Samachara

17/07/2022 06:00 pm

Cinque Terre

488

Cinque Terre

0

ಸಂಬಂಧಿತ ಸುದ್ದಿ