ಯಲಹಂಕ: 6 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮೂಕ ಮಗ ಭರತ್. ಯಲಹಂಕದ ಸಿಂಗನಾಯಕನಹಳ್ಳಿಯ ತಾಯಿ ತರಕಾರಿ ವ್ಯಾಪಾರಿ ಪಾರ್ವತಮ್ಮ ಮಗನ ಜೊತೆ ವಾಸವಿದ್ದರು. 6 ವರ್ಷಗಳ ಹಿಂದೆ ಭರತ್ ಯಲಹಂಕ ರೈತರ ಸಂತೆಯಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ತಾಯಿ ಯಲಹಂಕ ಪೊಲೀಸರಿಗೆ ದೂರು ನೀಡಿದ್ದರು. ಆದರೂ ಪ್ರಯೋಜನ ಆಗಿರಲಿಲ್ಲ. ಮಗನಿಗಾಗಿ ದೇಶದ ಎಲ್ಲಾ ದೇವಸ್ಥಾನಗಳಿಗೆ ಸುತ್ತಿ ಹರಕೆ ಹೊತ್ತಿದ್ದರು. ಮಗ ಸಿಕ್ಕಿರಲಿಲ್ಲ. ಮಗ ಭರತ್ ಗಾಗಿ ಎಲ್ಲೆಡೆ ಹುಡುಕಾಡಿ ಸೋತಿದ್ದರು ತಾಯಿ.
ಯಲಹಂಕದಿಂದ ತಪ್ಪಿಸಿಕೊಂಡು ಮಹಾರಾಷ್ಟ್ರದ ನಾಗ್ಪುರ ರೈಲ್ವೆ ನಿಲ್ದಾಣ ಸೇರಿದ್ದ ಭರತ್. ಅತಂತ್ರನಾಗಿದ್ದ ಭರತ್ ನನ್ನ ರಕ್ಷಿಸಿ ಅಲ್ಲಿನ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದ ಅಧಿಕಾರಿಗಳು.
6 ವರ್ಷಗಳಿಂದ ಆಶ್ರಯ ಪಡೆದಿದ್ದ ಭರತ್‌ಗೆ ಆಧಾರ್ ಕಾರ್ಡ್ ಮಾಡಿಸಲು 2022 ರ ಜನವರಿಯಲ್ಲಿ, ಸ್ಥಳೀಯ ಆಧಾರ್ ಸೇವಾ ಕೇಂದ್ರಕ್ಕೆ ಭರತ್‌ನನ್ನು ಅಧಿಕಾರಿ ಮಹೇಶ್ ಕರೆದೆಕೊಂಡು ಹೋಗಿದ್ದರು. ಆದರೆ, ಭರತ್‌ನ ಹೊಸ ಆಧಾರ್ ಕಾರ್ಡ್ ತಿರಸ್ಕೃತವಾದ ಬಗ್ಗೆ ಆಧಾರ್ ಸೇವಾ ಕೇಂದ್ರ ಅಧಿಕಾರಿ ಮಾಹಿತಿ ನೀಡಿದ್ದರು.
ಈಗಾಗಲೇ ಬೆಂಗಳೂರಿನಲ್ಲಿ ಬಿ.ಭರತ್ ಕುಮಾರ್ ಹೆಸರಿನಲ್ಲಿ ಆತನ ಕಾರ್ಡ್ ಚಾಲ್ತಿಲಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ತಿಳಿದ ಕೂಡಲೇ ಭರತ್ ಪೋಷಕರ ವಿಳಾಸ ಪತ್ತೆಗೆ ನೆರವಾಗುವಂತೆ ವಿನಂತಿಸಿದ್ದ ಮಹೇಶ್. ಪುನರ್ ವಸತಿ ಕೇಂದ್ರದ ಅಧಿಕಾರಿ ಮಹೇಶ್ ಮನವಿಗೆ ಸ್ಪಂದಿಸಿದ ಆಧಾರ್ ಕೇಂದ್ರ, ಬಿ.ಭರತ್ ಕುಮಾರ್ ಹೆಸರಿನಲ್ಲಿದ್ದ ವ್ಯಕ್ತಿಯ ಬೆರಳಚ್ಚು ಹೋಲಿಕೆ ಮಾಡಿದಾಗ ಎರಡೂ ಮ್ಯಾಚ್ ಆಗಿತ್ತು. ಆಧಾರ್ ಮೂಲಕ ಭರತ್‌ನ ತಾಯಿ ಪಾರ್ವತಮ್ಮನ ಮೊಬೈಲ್ ನಂಬರ್ ಸಿಕ್ಕಿತ್ತು.
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪುನರ್ ವಸತಿ ಕೇಂದ್ರ ಮಾಹಿತಿ ನೀಡಿದ್ದತ್ತು. ಕೊನೆಗೆ ಯಲಹಂಕ ಪೊಲೀಸರನ್ನು ನಾಗ್ಪುರದ ಅಧಿಕಾರಿಗಳು ಸಂಪರ್ಕಸಿದರು. ಭರತ್ ತಾಯಿನ ಪತ್ತೆ ಹಚ್ಚಿದ್ದ ಯಲಹಂಕ ಠಾಣೆ ಇನ್ಸ್‌ಪೆಕ್ಟರ್ ಸತ್ಯನಾರಾಯಣ್ ಪಾರ್ವತಮ್ಮರನ್ನ ಪೊಲೀಸರ ಜೊತೆ ನಾಗ್ಪುರಕ್ಕೆ ಕಳುಹಿಸಿದ್ದರು.
ಮಾರ್ಚ್.7 ರಂದು ಕುಟುಂಬದ ಜೊತೆ ನಾಗ್ಪುರಕ್ಕೆ ತೆರಳಿ ಮಗನನ್ನು ಕಂಡು ಭಾವುಕರಾಗಿ ತಬ್ಬಿ ಮುದ್ದಾಡಿದ ತಾಯಿ ಪಾರ್ವತಮ್ಮ, ಮಗನನ್ನು ಮನೆಗೆ ಕರೆ ತಂದಿದ್ದಾರೆ. 6 ವರ್ಷಗಳ ಬಳಿಕ ಕೊನೆಗೂ ತಾಯಿಯ ಮಡಿಲು ಸೇರಿದ ಮಗ ಭರತ್. ಈ ಪ್ರಕರಣದಲ್ಲಿ ಪುನರ್ ವಸತಿ ಕೇಂದ್ರದ ಅಧಿಕಾರಿಗಳು ಮತ್ತು ಆಧಾರ್ ಕೇಂದ್ರದ ಅಧಿಕಾರಿಗಳ ಕಾರ್ಯವನ್ನ ಮೆಚ್ಚಲೇಬೇಕು ಅಲ್ಲವೇ ? PublicNext ಕಡೆಯಿಂದಲೂ ಇವರಿಗೆ ಒಂದು ದೊಡ್ಡ ಸಲಾಂ
Kshetra Samachara
12/03/2022 01:39 pm