ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಗರ ಮತ್ತು ಪಟ್ಟಣ ಸ್ವಚ್ಛತೆಯಿಂದ ಕಂಗೊಳಿಸಲು ಕಾರಣ ಪೌರಕಾರ್ಮಿಕರು: ಪುರಸಭೆ ಅಧ್ಯಕ್ಷ ಪದ್ಮನಾಭ ಹೇಳಿಕೆ

ಆನೇಕಲ್:ರಸ್ತೆಗಳು ಮತ್ತು ನಗರಗಳು ಸ್ವಚ್ಛತೆಯಿಂದ ಕಂಗೊಳಿಸುತ್ತಿದೆ ಅಂತ ಅಂದ್ರೆ ಅದಕ್ಕೆ ಕಾರಣ ಪೌರಕಾರ್ಮಿಕರು ಜೊತೆಗೆ ಒಬ್ಬ ಜನ ಜನಪ್ರತಿನಿಧಿಗೆ ಒಳ್ಳೆ ಹೆಸರು ಬರಲು ಕೂಡ ಪೌರಕಾರ್ಮಿಕರ ಕಾರಣ ಎಂದು ಪೌರ ಕಾರ್ಮಿಕರನ್ನ ಉದ್ದೇಶಿಸಿ ಮಾತನಾಡಿದರು

ಹೌದು ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಆನೇಕಲ್ ಪುರಸಭೆ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಇನ್ನು ಪೌರ ಕಾರ್ಮಿಕರ ದಿನಾಚರಣೆಯ ಸಮಾರಂಭಕ್ಕೆ ಆನೇಕಲ್ ಪುರಸಭೆ ಅಧ್ಯಕ್ಷ ಎನ್.ಎಸ್ ಪದ್ಮನಾಭ ಮತ್ತು ಪುರಸಭೆ ಸದಸ್ಯರು ಚಾಲನೆ ನೀಡಿ ಶುಭ ಹಾರೈಸಿದರು.ಇನ್ನು ಇದೇ ಸಂಧರ್ಭದಲ್ಲಿ ಪೌರ ಕಾರ್ಮಿಕರಿಗೆ ನೆನಪಿನ ಕಾಣಿಕೆ ವಿತರಣೆ, ಗೌರವ ಧನ ಮತ್ತು ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ ಪೌರ ಕಾರ್ಮಿಕರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಇನ್ನು ಈ ವೇಳೆ ಆನೇಕಲ್ ಪುರಸಭೆ ಅಧ್ಯಕ್ಷ ಎನ್.ಎಸ್. ಪದ್ಮನಾಭ್ ರವರು ಮಾತನಾಡಿ ಆನೇಕಲ್ ಪುರಸಭೆ ಇಷ್ಟೋಂದು ಸುಂದರವಾಗಿ ಕಾಣಿಸಲು ಪೌರಕಾರ್ಮಿಕರ ಶ್ರಮ ಮತ್ತು ಕರ್ತವ್ಯ ಎಂದು ತಿಳಿಸಿದರು ಇನ್ನೂ ಈ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರು ಹಾಗೂ ಪೌರಕಾರ್ಮಿಕರು ಭಾಗಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

23/09/2022 10:05 pm

Cinque Terre

1.5 K

Cinque Terre

0

ಸಂಬಂಧಿತ ಸುದ್ದಿ