ಯಶವಂತಪುರ: ಗಣೇಶ ಹಬ್ಬ, ಬಿಬಿಎಂಪಿ ಚುನಾವಣೆ ಹತ್ತಿರ ಬರ್ತಿದ್ದಂತೆ ಬೆಂಗಳೂರು ಪೊಲೀಸರು ರೌಡಿಗಳ ಮೇಲೆ ಹದ್ದಿನಕಣ್ಣಿಟ್ಟಿದ್ದಾರೆ. ಸದ್ಯ ರೌಡಿಗಳಿಗೆ ಸರ್ಪ್ರೈಸ್ ಶಾಕ್ ಕೊಟ್ಟಿರೋ ಉತ್ತರ ವಿಭಾಗ ಪೊಲೀಸರು ಬೆಳ್ಳಂಬೆಳಗ್ಗೆ ರೌಡಿಶೀಟರ್ ಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್,ಪೀಣ್ಯಾ, ಸೇರಿದಂತೆ ಉತ್ತರ ವಿಭಾಗದ ಎಲ್ಲಾ ಠಾಣಾ ವ್ಯಾಪ್ತಿಯ ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ಮುಂಜಾನೆ ನಾಲ್ಕು ಗಂಟೆಗೆ ರೌಡಿ ಆಸಾಮಿಗಳ ಮನೆಬಾಗಿಲು ತಟ್ಟಿ ನಿದ್ದೆಗಣ್ಣಿನಲ್ಲಿದ್ದ ರೌಡಿಗಳಿಗೆ ಶಾಕ್ ನೀಡಿದ್ರು.
ಸುಮಾರು ಇನ್ನೂರಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ಆಯಾ ಠಾಣಾ ವ್ಯಾಪ್ತಿಯ ಪ್ರಮುಖ ರೌಡಿಗಳನ್ನ ಠಾಣೆಗೆ ಕರೆಸಿ ಬಾಂಡ್ ಓವರ್ ಮಾಡಿಸಿದ್ದಾರೆ. ಇನ್ನೂ ಈ ದಾಳಿಯಲ್ಲಿ 6 ಮಂದಿ ಆರೋಪಿಗಳು ಕೋರ್ಟ್‌ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ರು, ಹೀಗಾಗಿ ವಾರೆಂಟ್ ತೆಗೆದುಕೊಂಡು ಹೋಗಿ ದಾಳಿಮಾಡಲಾಗಿದೆ.
PublicNext
26/08/2022 02:55 pm