ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಿಥಿಲಾವಸ್ಥೆಗೆ ತಲುಪಿದ ಅರಣ್ಯಾಧಿಕಾರಿಗಳ ಕಚೇರಿ

ಬೆಂಗಳೂರು: ಸರ್ಕಾರಿ ಕಟ್ಟಡಗಳೆಂದರೆ ಕಾಳಜಿಯಿಲ್ಲದೆ ಗುಣಮಟ್ಟವಿಲ್ಲದೆ ಕಟ್ಟಿದ ಕಟ್ಟಡಗಳು ಎಂಬ ಅನುಮಾನ. ಅದು ಮಾತ್ರವಲ್ಲದೆ ಶಿಥಿಲಾವಸ್ಥೆಗೆ ತಲುಪಿದ್ದು ಇಂದು-ನಾಳೆ ಕಟ್ಟಡ ಗೋಡೆಗಳು ಬೀಳುವಂತ ಹಂತಕ್ಕೆ ತಲುಪಿರುವ ಘಟನೆ ಆನೇಕಲ್ ವಲಯ ಅರಣ್ಯಾಧಿಕಾರಿಗಳ ಕಚೇರಿ ಕಣ್ಣ ಮುಂದೆ ಸುಳಿಯುತ್ತಿದೆ.

ಆನೇಕಲ್-ಹೊಸೂರು ರಸ್ತೆಯ ತಿಮ್ಮರಾಯಸ್ವಾಮಿ ಸ್ವಾಗತ ಕಮಾನಿನ ಎಡಗಡೆಯ ಮೂಲೆಯಲ್ಲಿ ಇರುವ ಈ ಕಟ್ಟಡಕ್ಕೆ ದಶಕಗಳು ಕಳೆದಿವೆ ಎಂಬಂತೆ ಕಣ್ಣಿಗೆ ಕಂಡರೂ ಅಷ್ಟೇನೂ ಹಳೆಯದಲ್ಲದ ಕಟ್ಟಡ ಇದು. ಇತ್ತೀಚೆಗೆ ಅಷ್ಟಿಷ್ಟು ಪರವಾಗಿಲ್ಲ, ಇನ್ನೂ ನೆಲಕ್ಕುರಳಲಿಲ್ಲ ಎಂದು ಸಮಾಧಾನ ಪಟ್ಟುಕೊಂಡು ಒಳಹೊಕ್ಕರೆ ಮತ್ತೆ ಆಚೆಗೆ ಓಡಿ ಬರುವಷ್ಟು ಶಿಥಿಲವಾಗಿದೆ ಕಟ್ಟಡ. ಇನ್ನು ಇಲ್ಲಿ ಕೆಲಸ ಮಾಡುವ ಅಧಿಕಾರಿ ವರ್ಗ ಜೀವ ಕೈಯಲ್ಲಿ ಹಿಡಿದುಕೊಂಡು ದಿನಂಪ್ರತಿ ಶಿಥಿಲಾವಸ್ಥೆಯ ಛಾವಣಿ ಕೆಳಗೆ ಕುಳಿತು ಕೆಲಸ ಮಾಡುವ ವ್ಯವಸ್ಥೆಯಿದೆ. ಗೋಡೆಗಳಲ್ಲಿ ಬಿರುಕು, ಕಿಟಕಿಗಳು ಹೊರ ಬಂದಂತೆ ಕಾಣತೊಡಗಿದ್ದು ಯಾವ ಸಂದರ್ಭದಲ್ಲಿ ಯಾವ ಗೋಡೆ ಎತ್ತ ಬೀಳುತ್ತದೆಯೋ ಎಂಬ ಚಿಂತೆ ಕಚೇರಿಯಲ್ಲಿನ ಸಿಬ್ಬಂದಿಗೆ ಕಾಡತೊಡಗಿದೆ.

ಮಳೆಗಾಲದಲ್ಲಿ ಆರ್ಸಿಸಿ ಚಾವಣಿ ಸುರಿಯುವುದಲ್ಲದೆ, ಬೇಸಿಗೆಯಲ್ಲಿ ಸಿಮೆಂಟ್ ತುಕ್ಕು ಹಿಡಿದ ಕಂಬಿ ಸಮೇತ ಉದುರುತ್ತಿದೆ. ಆಗ ಎಥೇಚ್ಛವಾಗಿ ಫಿಲ್ಟರ್ ಮರಳು ಸಿಗುತ್ತಿದ್ದ ಕಾರಣ ಸರ್ಕಾರಿ ಕಟ್ಟಡಗಳಿಗೆ ಈ ಮರಳು ಬಳಸಿದ್ದರಿಂದ ಕಟ್ಟಡ ಈ ದುಸ್ಥಿತಿಗೆ ಬಂದಿದೆ ಎಂದು ನಾಗರೀಕರು ದೂರುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

28/06/2022 08:23 pm

Cinque Terre

2.14 K

Cinque Terre

0

ಸಂಬಂಧಿತ ಸುದ್ದಿ