ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯುದ್ಧಗ್ರಸ್ತ ಉಕ್ರೇನ್ ನಲ್ಲಿ ಸಿಲುಕಿದ್ದ ಕನ್ನಡಿಗರ ಏರ್ ಲಿಫ್ಟ್

ದೇವನಹಳ್ಳಿ:- ಯುದ್ಧಾತಂಕದ ಉಕ್ರೇನ್ ನಿಂದ ಅನೇಕ ತಂಡಗಳಾಗಿ ಭಾರತೀಯರು ಮತ್ತು ಕನ್ನಡಿಗರು ದೇಶಕ್ಕೆ ಆಗಮಿಸುತ್ತಿದ್ದಾರೆ.

ಇಂದು ದೆಹಲಿಯಿಂದ ಬೆಂಗಳೂರಿಗೆ ಏಳು ಜನ ವಿದ್ಯಾರ್ಥಿಗಳು ಆಗಮಿಸಿದ್ದಾರೆ.

ಬೆಳಗ್ಗೆ 10:45 ರ ವೆಳೆಗೆ ವಿಮಾನದಲ್ಲಿ ಕೆಐಎ ಗೆ 7 ಜನ ವಿದ್ಯಾರ್ಥಿಗಳು ಬಂದಿಳಿದರು. ನಿನ್ನೆ ಉಕ್ರೇನ್ ನಿಂದ ದೆಹಲಿಗೆ ಬಂದಿದ್ದ ವಿದ್ಯಾರ್ಥಿಗಳು ರಾತ್ರಿ ಕರ್ನಾಟಕ ಭವನದಲ್ಲಿ ಉಳಿದುಕೊಂಡು ಇದೀಗ ಬೆಂಗಳೂರಿಗೆ ಆಗಮಿಸಿದ್ದಾರೆ.

ಇನ್ನು ಉಕ್ರೇಣ್ ನಿಂದ ಬಂದ ವಿದ್ಯಾರ್ಥಿಗಳು ಇವರೆ ನೋಡಿ ಸುದರ್ಶನ್, ಇಮಾನ್ ರಾಜ್, ಆಲಿ ಅಬ್ಬಾಸ್ ರಾಜ್, ಆದೀಪ್,ಧನುಜಾ, ಅರ್ಪಿತಾ ಮತ್ತು ಮೇದಾ.

ಸದ್ಯ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಮ್ಮ ಪ್ರದೇಶಗಳತ್ತ ವಿದ್ಯಾರ್ಥಿಗಳು ತೆರಳಿದರು. ಇದೇ ವೇಳೆ ಮಾತಮಾಡಿದ ವಿದ್ಯಾರ್ಥಿ ತವರಿಗೆ ವಾಪಸ್ಸಾಗಿದ್ದು ಸಂತಸವಾಗಿದೆ ಎಂದರು.

Edited By : Manjunath H D
PublicNext

PublicNext

01/03/2022 01:17 pm

Cinque Terre

32.56 K

Cinque Terre

0

ಸಂಬಂಧಿತ ಸುದ್ದಿ