ಬೆಂಗಳೂರು: 2001 ರಲ್ಲಿ ಪ್ರಾರಂಭವಾದ ಟೊಯೋಟೊ ಕಿರ್ಲೋಸ್ಕರ್ ಮೋಟಾರ್ ಸಂಘವು 21ನೇ ವರ್ಷದ ಸಂಭ್ರಮವನ್ನ ಆಚರಣೆ ಮಾಡ್ತಿದೆ. ಒಟ್ಟು 3500 ಕಾರ್ಮಿಕರನ್ನು ಹೊಂದಿದ ಸಂಘ ಇದಾಗಿದೆ. ಅಷ್ಟು ಕಾರ್ಮಿಕರ ಸಂಬಳದಲ್ಲಿ ಸ್ವಲ್ಪ ಹಣವನ್ನ ಮಕ್ಕಳಿಗೆ ಮೀಸಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷವೂ ಒಂದೊಂದು ಸರ್ಕಾರಿ ಶಾಲೆಗಳನ್ನ ಗುರುತಿಸಿ ಅಭಿವೃದ್ಧಿ ಪಥಕ್ಕೆ ತಲುಪಿಸುವ ಬೃಹತ್ ಕಾರ್ಯ ಮಾಡ್ತಿದ್ದಾರೆ..
ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳ ಸಮಸ್ಯೆ, ಮಕ್ಕಳಿಗೆ ಬೇಕಾಗಿರುವ ಆಟದ ಉಪಕರಣಗಳು ಒದಗಿಸುತ್ತಾರೆ.. ಈ ಬಾರಿ ನಗರದ ಉಲ್ಲಾಳ್ ವಾರ್ಡ್ ನಲ್ಲಿರುವ ದೊಡ್ಡಗೊಲ್ಲರಟ್ಟಿ ಹೈಸ್ಕೂಲ್ ನ ಆಯ್ಕೆ ಮಾಡಿ, ಅಲ್ಲಿರುವ 850 ಮಕ್ಕಳಿಗೆ, ಪುಸ್ತಕ, ಪೆನ್,ಜಾಮೆಟ್ರಿ ಬಾಕ್ಸ್, ಡಂಬಲ್ಸ್, ವಾಲಿಬಾಲ್, ಫುಟ್‌ಬಾಲ್ಸ್, ಥ್ರೋಬಾಲ್ ನೆಟ್, ಡಸ್ಟ್ ಬಿನ್ ಗಳನ್ನ ವಿತರಣೆ ಮಾಡಿದ್ದಾರೆ. ನಂತರ ಮಕ್ಕಳಲ್ಲಿ ರಕ್ತದ ಬಗ್ಗೆ ಅರಿವು ಮೂಡಿಸಲು ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಸಿ, ಕಾರ್ಮಿಕರಿಗೆ ರಕ್ತದಾನ ಸರ್ಟಿಫಿಕೇಟ್ಸ್ ಕೊಟ್ಟು ಉತ್ತೇಜಿಸಿದ್ದಾರೆ..
ಬೈಟ್-
ಇನ್ನು ಈ ಶಾಲೆಯಲ್ಲಿ ಶೌಚಾಲಯದ ಸಮಸ್ಯೆಯಿದ್ದು, ಅದನ್ನು ಸರಿಪಡಿಸಲು ಸಹಾಯ ಮಾಡುವುದಾಗಿ ಕಾರ್ಮಿಕರು ಹೇಳಿದ್ದಾರೆ. ಒಟ್ಟಿನಲ್ಲಿ ಕಾರ್ಮಿಕರು ಅವರ ಸಂಬಳದಲ್ಲಿ ಈ ಶಾಲಾ ಮಕ್ಕಳಿಗೆ ಈ ತರಹದ ಸಹಾಯ ಮಾಡ್ತಿರೋದು ನಿಜಕ್ಕೂ ಶ್ಲಾಘನೀಯ..
ರಂಜಿತಾಸುನಿಲ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು..
Kshetra Samachara
28/06/2022 03:52 pm