ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: ಸರ್ಕಾರಿ ಶಾಲೆಗಳ ʼದತ್ತುʼ ತಾಕತ್ತು; ಖಾಸಗಿ ಶಾಲೆಗೇ ಸೆಡ್ಡು!

ವಿಶೇಷ ವರದಿ: ಸುರೇಶ್‌ ಬಾಬು,

ʼಪಬ್ಲಿಕ್ ನೆಕ್ಸ್ಟ್ʼ ಯಲಹಂಕ

ಯಲಹಂಕ: ಸರ್ಕಾರಿ ಶಾಲೆಗಳಿಗೂ ಸೂಕ್ತ ಸೌಲಭ್ಯ ಒದಗಿಸಿದರೆ ಯಾವುದೇ ಖಾಸಗಿ ಸಂಸ್ಥೆಗೂ ಕಡಿಮೆ ಇಲ್ಲದಂತೆ ಕಲಿಕೆ ಲಭ್ಯ. ಹೌದು, ಯಲಹಂಕದ ಐದು ಸರ್ಕಾರಿ ಶಾಲೆಗಳು ಖಾಸಗಿ‌ ಶಾಲೆಗಳಿಗೆ ಸೆಡ್ಡು ಹೊಡೆಯಲು ಸಿದ್ಧವಾಗ್ತಿವೆ! ಅದು ಹೇಗೆ ಅನ್ನೋದರ ಬಗ್ಗೆ ʼಪಬ್ಲಿಕ್ ನೆಕ್ಸ್ಟ್ʼ ನ ವಿಶೇಷ ವರದಿ.

ಮಕ್ಕಳ ಕಡ್ಡಾಯ ಶಿಕ್ಷಣಕ್ಕೆ ರಾಜ್ಯ, ಕೇಂದ್ರ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡ್ತಿದೆ. ಆದರೆ, ಸರ್ಕಾರದ ಸೌಲಭ್ಯ ಹಲವು ಶಾಲೆಗಳಿಗೆ ತಲುಪುವುದು ತೀರಾ ವಿರಳ. ಮೂಲ ಸೌಲಭ್ಯ ಕೊರತೆಯಿಂದ ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳಿಗೆ ಪೈಪೋಟಿ ಕೊಡಲಾಗದೆ ಮುಚ್ಚಲ್ಪಡುತ್ತಿವೆ. ಆದರೂ ಗ್ರಾಮಸ್ಥರು, ಖಾಸಗಿ ಸಂಸ್ಥೆಗಳ ನೆರವು ಸಿಕ್ಕರೆ ಸರ್ಕಾರಿ ಶಾಲೆಗಳೂ ಉತ್ತಮ ಶಿಕ್ಷಣ ಕೊಡಲು ಸಾಧ್ಯ.

ಹೀಗೊಂದು ಖಾಸಗಿ ಸಂಸ್ಥೆ, ಯಲಹಂಕ ತಾಲೂಕಿನ ಚೊಕ್ಕನಹಳ್ಳಿ, ಹನಿಯೂರು, ಚಲ್ಲಹಳ್ಳಿ, ಹೇಸರಘಟ್ಟ ಮತ್ತು ತಿರುಮಲಪುರದ 5 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿದೆ. ಇದೀಗ ಚಲ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ ಶುರುವಾಗಿ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಮುಂದಾಗ್ತಿದ್ದಾರೆ.

WME ಸಾಫ್ಟ್‌ ವೇರ್ ಸಂಸ್ಥೆ ಯಲಹಂಕದ 5 ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿದೆ. ಮೊದಲ ಹಂತವಾಗಿ ಸುಣ್ಣಬಣ್ಣ ಬಳಿದು, ಕಲಾಚಿತ್ರಗಳು ಶಾಲಾ ಗೋಡೆ ಚೆಂದಗೊಳಿಸಿವೆ. ಸೋರುತ್ತಿದ್ದ ಮೇಲ್ಚಾವಣಿ ಸುಸಜ್ಜಿತಗೊಂಡಿವೆ. ಕಾಂಪೌಂಡ್, ಶೌಚಾಲಯ, ಆಸನ ಸೇರಿ ಪಠ್ಯ, ಪಠ್ಯೇತರ ಸೌಲಭ್ಯ ಒದಗಿಸಿದರೆ ಸರ್ಕಾರಿ ಶಾಲೆ, ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಶಿಕ್ಷಣ ಒದಗಿಸಲಿವೆ.

Edited By : Manjunath H D
PublicNext

PublicNext

08/01/2022 03:11 pm

Cinque Terre

38.35 K

Cinque Terre

4

ಸಂಬಂಧಿತ ಸುದ್ದಿ