ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗ್ರಾಮಗಳ ಅಭಿವೃದ್ಧಿಗೆ ಗ್ರಾಮಸಭೆ ಅತ್ಯಗತ್ಯ

ಹೊಸಕೋಟೆ: ಭಾರತ 8ಲಕ್ಷಕ್ಕೂ ಅಧಿಕ‌ ಹಳ್ಳಿಗಳ ದೇಶ. ಹಳ್ಳಿ ಚನ್ನಾಗಿದ್ದರೆ ಡೆಲ್ಲಿ ಚನ್ನಾಗಿರುತ್ತದೆ. ಅದೇ ರೀತಿ ಗ್ರಾಮಗಳ ಸರ್ವಾಂಗಿಣ ಅಭಿವೃದ್ದಿಗೆ ಗ್ರಾಮ ಸಭೆ ಮುಖ್ಯ ವೇದಿಕೆಯಾಗಿದೆ. ಗ್ರಾಮಸಭೆಗಳಲ್ಲಿ ಜನ ಹೆಚ್ಚಾಗಿ ಭಾಗವಹಿಸುವ ಮೂಲಕ ತಮ್ಮೂರ ಅಭಿವೃದ್ದಿಗೆ ದ್ವನಿಯಾಗಬೇಕು. ಇಂಥ ವೇದಿಕೆಗಳ ಸದ್ಬಳಕೆ ಮಾಡಿಕೊಂಡು ಸರಕಾರಿ ಸೌಲಭ್ಯ ಮಾಹಿತಿ ಪಡೆದುಕೊಳ್ಳಬೇಕೆಂದು ಗಿಡ್ಡಪ್ಪನಹಳ್ಳಿ ಗ್ರಾಪಂ ಅಧ್ಯಕ್ಷ ಅಕ್ಬರ್ ಆಲಿಖಾನ್ ತಿಳಿಸಿದರು.

ಹೊಸಕೋಟೆ ತಾಲೂಕು ಸೂಲಿಬೆಲೆಯಗಿಡ್ಡಪ್ಪನಹಳ್ಳಿ ಗ್ರಾಮ ಪಂಚಾಯ್ತಿನಲ್ಲಿ ಬುಧವಾರ ನಡೆದ ಗ್ರಾಮಸಭೆಲಿ ಮಾತನಾಡಿದರು. ನರೇಗಾದಲ್ಲಿ ಜನರೇ ತಮ್ಮ ಕೆಲ್ಸ ಮಾಡಿಕೊಳ್ಳಬಹುದು. ರಸ್ತೆ, ಚರಂಡಿ, ಬೀದಿ ದೀಪಗಳು, ಶೌಚಾಲಯ, ವಸತಿ, ನಿವೇಶನ, ದನದ ಕೊಟ್ಟಿಗೆ ಇತ್ಯಾದಿ ಸೌಲಭ್ಯ ಬೇಡಿಕೆಯಿದ್ದಲ್ಲಿ ಪಿಡಿಒಗೆ ಅರ್ಜಿ ನೀಡಬಹುದೆಂದರು. ಗ್ರಾಮಸಭೆಲಿ ಗಿಡ್ಡಪ್ಪನಹಳ್ಳಿ ಗ್ರಾಮ ಪಂಚಾಯ್ತು ಸದಸ್ಯರು, ಅಧಿಕಾರಿಗಳು, ಗ್ರಾಮದ ಜನ ಭಾಗವಹಿಸಿದ್ದು ಚನ್ನಾಗಿತ್ತು.

Edited By : PublicNext Desk
Kshetra Samachara

Kshetra Samachara

17/08/2022 09:48 pm

Cinque Terre

2.6 K

Cinque Terre

0

ಸಂಬಂಧಿತ ಸುದ್ದಿ