ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸ್ವಾತಂತ್ರ್ಯದ ಅಮೃತಮಹೋತ್ಸವ ಪ್ರಯುಕ್ತ ಯಲಹಂಕದಲ್ಲಿ ಮಹಿಳಾ ಸಬಲೀಕರಣಕ್ಕೆ 46ಲಕ್ಷದ ಚೆಕ್ ವಿತರಣೆ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಶು ಅಭಿವೃದ್ಧಿ ಇಲಾಖೆಗಳು ಜಂಟಿಯಾಗಿ‌ ಯಲಹಂಕದಲ್ಲಿ ಸ್ತ್ರೀಸಬಲೀಕರಣಕ್ಕಾಗಿ 46ಸ್ತ್ರೀಶಕ್ತಿ ಸಂಘಗಳಿಗೆ ಪ್ರೊತ್ಸಾಹ ಧನವಾಗಿ 46ಲಕ್ಷ ರೂಪಾಯಿ ಚೆಕ್‌ಗಳನ್ನು ವಿತರಿಸಲಾಯ್ತು.

ಸಮಾಜ ಮತ್ತು ಮನೆಯ ಏಳ್ಗೆಗೆ ಮಹಿಳೆಯರ ಶ್ರಮ ಬಹಳ ಮುಖ್ಯ. ಮಹಿಳೆಗೆ ಸಹಾಯ ಮಾಡಿದರೆ ಕುಟುಂಬಕ್ಕೆ ಮಾಡಿದ ಪ್ರೋತ್ಸಾಹ. ಆದ್ದರಿಂದ ಸರ್ಕಾರ ಯಲಹಂಕ ತಾಲೂಕಿನಲ್ಲಿ ತುಂಬಾ ಕ್ರೀತಾಶೀಲವಾಗಿ‌ ಗ್ರಾಮಪಂಚಾಯ್ತಿ ವ್ಯಾಪ್ತಿಗಳಲ್ಲಿ‌ ಉತ್ತಮ ಸೇವೆ ಮಾಡಿದ 46 ಸ್ತ್ರೀಶಕ್ತಿ ಸಂಘಗಳನ್ನು ಹಂತಹಂತವಾಗಿ ಗುರ್ತಿಸಿ ಅವರನ್ನು ಬೆಂಬಲಿಸಿ ಮತ್ತು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ತಿಳಿಸಿದರು.

ಇನ್ನು ಇದೇ ವೇಳೆ ಮಾತನಾಡಿದ ಪ್ರೋತ್ಸಾಹ ಧನ‌ ಪಡೆದ ಮಹಿಳೆಯರು, ಈ ರೀತಿಯ ನೆರವಿನಿಂದ ಸ್ತ್ರೀಶಕ್ತಿ ಸಂಘಗಳಿಗೆ ಬಲ‌ ತುಂಬಿದಂತಾಗುತ್ತದೆ ಎಂದು ಸ್ತ್ರೀಶಕ್ತಿ ಸಂಘದ ಸಹೋದರ ‌ತಿಳಿಸಿದರು. ಯಲಹಂಕ ತಾಲೂಕಿನ‌ ಹೆಸರಘಟ್ಟ ಹೋಬಳಿ ಮತ್ತು ದಾಸನಪುರ ಹೋಬಳಿಗಳ 46 ಸ್ತ್ರೀಶಕ್ತಿ ಗುಂಪುಗಳ ಸುಮಾರು 300 ಕ್ಕು ಹೆಚ್ಚು ಸ್ತ್ರೀ ಶಕ್ತಿ ಗುಂಪುಗಳು ಮಹಿಳೆಯರು, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಯಲಹಂಕ ಬೆಂಗಳೂರು

Edited By : Somashekar
Kshetra Samachara

Kshetra Samachara

30/06/2022 12:07 pm

Cinque Terre

4.33 K

Cinque Terre

0

ಸಂಬಂಧಿತ ಸುದ್ದಿ