ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರೇಷ್ಮೆ ಕೃಷಿಯಲ್ಲಿ ದೊಡ್ಡಬಳ್ಳಾಪುರದ ಮಹಿಳೆ ರಾಜ್ಯಕ್ಕೆ ನಂಬರ್ 1

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರವನ್ನು ರೇಷ್ಮೆ ನಗರಿ ಎಂದು ಕರೆಯಲಾಗುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ ರೇಷ್ಮೆ ಕೃಷಿ ಅಷ್ಟಕಷ್ಟೇ ಆಗಿದ್ದರೂ ತಾಲೂಕಿನ ಮಹಿಳೆಯೊಬ್ಬರು ರೇಷ್ಮೆ ಕೃಷಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುವ ಮೂಲಕ ತಾಲೂಕಿಗೆ ಗೌರವ ತಂದಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಸೀಗೆಹಳ್ಳಿ ಗ್ರಾಮದ ರತ್ನಮ್ಮ ರಾಮಯ್ಯ ಅವರಿಗೆ ಮಹಿಳಾ ವಿಭಾಗದ ರೇಷ್ಮೆ ಕೃಷಿ ಸಾಧನೆ 2020-21ರ ಸಾಲಿನ ರಾಜ್ಯ ಮಟ್ಟದ ಪ್ರಥಮ ಸ್ಥಾನ ಬಂದಿದೆ. ಇದರ ಜೊತೆಗೆ ತಾಲೂಕಿನ ಮರಳೇನಹಳ್ಳಿ ಗ್ರಾಮದ ತಿಮ್ಮರಾಜು ಅವರಿಗೆ ಜಿಲ್ಲಾ ಮಟ್ಟದ ದ್ವಿತೀಯ ಸ್ಥಾನ ಬಂದಿದೆ.

ರತ್ನಮ್ಮ ರಾಮಯ್ಯನವರು ಕಳೆದ 25 ವರ್ಷದಿಂದ ರೇಷೆ ಕೃಷಿಯನ್ನು ಮಾಡುತ್ತಿದ್ದಾರೆ. ಇಡೀ ಕುಟುಂಬ ರೇಷ್ಮೆ ಕೃಷಿಯಲ್ಲಿ ತೊಡಗಿದೆ. ರೇಷ್ಮೆ ಇಲಾಖೆ ಅಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನವನ್ನು ನೆನೆಯುವ ರತ್ನಮ್ಮ ಕುಟುಂಬ ತಮ್ಮ ರೇಷ್ಮೆ ಕೃಷಿಯ ಅನುಭವ ಹಂಚಿಕೊಂಡರು. 10 ವರ್ಷಗಳ ಹಿಂದೆ ಪ್ರತಿ ಕೆಜಿ ರೇಷ್ಮೆಗೆ 150ರಿಂದ 300 ರೂಪಾಯಿ ಧಾರಣೆ ಇತ್ತು. ಅದರೆ ಇವತ್ತು ಪ್ರತಿ ಕೆಜಿಗೆ 900 ರೂ. ಬೆಲೆ ಸಿಗುತ್ತಿದೆ. ರೇಷ್ಮೆ ಇಲಾಖೆಯ ನೆರವಿನಿಂದ ಹಿಪ್ಪು ನೇರಳೆ ಬೆಳೆಯಲು ನರೇಗಾದಿಂದ ಸಹಾಯ ಧನ, ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ ಸಹಾಯ ಧನ ಸಿಕ್ಕಿದೆ. ಇದರಿಂದ ವರ್ಷಕ್ಕೆ ಸುಮಾರು 11 ಬೆಳೆಗಳನ್ನು ಬೆಳೆಯುತ್ತಿದ್ದೇವೆ ಮತ್ತು ವರ್ಷಕ್ಕೆ 3.83 ಲಕ್ಷ ಲಾಭ ಬಂದಿದೆ ಎಂದರು.

ರತ್ನಮ್ಮ ರಾಮಯ್ಯರವರಿಗೆ ರಾಜ್ಯ ಮಟ್ಟದ ಪ್ರಥಮ ಸ್ಥಾನ ಬಂದಿರುವುದಕ್ಕೆ ದೊಡ್ಡಬಳ್ಳಾಪುರ ರೇಷ್ಮೆ ಇಲಾಖೆ ಮತ್ತು ಜಿಲ್ಲಾ ರೇಷ್ಮೆ ಇಲಾಖೆ ಖುಷಿಗೊಂಡಿದೆ. 2020-21ನೇ ಸಾಲಿನಿಂದ ರೇಷ್ಮೆ ಬೆಳೆಗಾರರು ದೊಡ್ಡಬಳ್ಳಾಪುರದಲ್ಲಿ ಹೆಚ್ಚುತ್ತಿದ್ದು, ಪ್ರಸ್ತುತ ದೊಡ್ಡಬಳ್ಳಾಪುರ ತಾಲೂಕಿನ 35 ಹೆಕ್ಟೇರ್‌ನಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಹಿಪ್ಪು ನೇರಳೆ ಬೆಳೆಯಲು ನರೇಗದಲ್ಲಿ ಸಹಾಯ ಧನ, ಹುಳು ಸಾಕಾಣಿಕೆ ಸಲಕರಣೆ, ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೂ ಇಲಾಖೆಯಿಂದ ಸಹಾಯಧನ ಕೊಡಲಾಗುತ್ತೆ, ರೇಷ್ಮೆ ಬೆಳೆಯಿಂದ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದ್ದು, ರೈತರು ರೇಷ್ಮೆ ಕೃಷಿ ತೊಡಗುವಂತೆ ಮನವಿ ಮಾಡಿದರು.

Edited By : Nagesh Gaonkar
PublicNext

PublicNext

07/03/2022 03:26 pm

Cinque Terre

31.63 K

Cinque Terre

0

ಸಂಬಂಧಿತ ಸುದ್ದಿ