ಮಲ್ಲೇಶ್ವರಂ: ಫೈಝರ್ CEO ಆಲ್ಬರ್ಟ್ ಬೌರ್ಲಾ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ನಾನು ಆರೋಗ್ಯವಾಗಿದ್ದು, ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ ಎಂದು ಅವರು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ನಾವು ಉತ್ತಮ ಪ್ರಗತಿಯನ್ನು ಸಾಧಿಸಿದ್ದರೂ, ವೈರಸ್ ಇನ್ನೂ ನಮ್ಮೊಂದಿಗೆ ಇದೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, ಬೌರ್ಲಾ ಅವರಿಗೆ ಆಗಸ್ಟ್‌ನಲ್ಲಿ ಕೊವಿಡ್ ಸೋಂಕು ದೃಢಪಟ್ಟಿತ್ತು. ಹಾಗಾಗಿ ಅವರು ಕೋವಿಡ್ -19 ಬೂಸ್ಟರ್ ಲಸಿಕೆಯನ್ನು ಪಡೆದಿರಲಿಲ್ಲ. ಸೋಂಕಿಗೆ ಒಳಗಾಗದ ಜನರು ಚೇತರಿಸಿಕೊಂಡ ನಂತರ ಸುಮಾರು ಮೂರು ತಿಂಗಳವರೆಗೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುವ ಕಡಿಮೆ ಅಪಾಯವನ್ನು ಹೊಂದಿರುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ.
Kshetra Samachara
26/09/2022 06:26 pm