ಬೆಂಗಳೂರು: ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಇಂದು ಬೆಂಗಳೂರಿನ ಹೆಬ್ಬಾಳದ ರಾಜೀವ್ ಗಾಂಧಿ ಆಸ್ಪತ್ರೆ ಮತ್ತು ಯಲಹಂಕದ ವಿಶ್ವವಾಣಿ ಪೌಂಡೇಷನ್ ಸಹಯೋಗದೊಂದಿಗೆ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಯಲಹಂಕ ತಾಲೂಕಿನ ಕಾಕೋಳು ಸರ್ಕಾರಿ ಪ್ರಾಥಮಿಕ ಮತ್ತುಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳು ಉಚಿತ ದಂತ ಚಿಕಿತ್ಸೆ ಶಿಬಿರದ ಪ್ರಯೋಜನ ಪಡೆದುಕೊಂಡರು. ಹಾಗೆಯೇ ದಂತ ಪಾಲನೆ ಮತ್ತು ಪೋಷಣೆ ಬಗ್ಗೆ ಅರಿವು ಮೂಡಿಸಲಾಯ್ತು. ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯರು ದಂತ ಚಿಕಿತ್ಸೆ ಮತ್ತು ಸ್ವಚ್ಛತೆಯನ್ನು ಮಕ್ಕಳು ಕಾಪಾಡಿಕೊಳ್ಳಬೇಕು. ಹಲ್ಲನ್ನು ಹಾಳಾಗದೆ ಕಾಪಾಡಿಕೊಂಡರೆ ಮುಂದೆ ದೇಹದ ಆರೋಗ್ಯ ಚನ್ನಾಗಿರುತ್ತದೆ ಎಂದು ತಿಳುವಳಿಕೆ ಮೂಡಿಸಿದರು. ಇದೇ ವೇಳೆ ಮಾತನಾಡಿದ ಗಣ್ಯರು ಮಕ್ಕಳ ಆರೋಗ್ಯದಲ್ಲಿ ಹಲ್ಲು ಬಹಳ ಮುಖ್ಯವಾದುದು. ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದರು.
SureshBabu Public Next ಯಲಹಂಕ.
Kshetra Samachara
01/07/2022 08:17 pm