ದೊಡ್ಡಬಳ್ಳಾಪುರ: ʼಈಡಿಸ್ʼ ಸೊಳ್ಳೆಯಿಂದ ಹರಡುವ ಡೆಂಘಿ ಜ್ವರಕ್ಕೆ ಬಾಲಕಿ ಬಲಿಯಾಗಿದ್ದಾಳೆ. ದೊಡ್ಡಬಳ್ಳಾಪುರ ತಾಲೂಕಿನ ಬೀಡಿಕೆರೆ ಗ್ರಾಮದ ಮುನಿರಾಜು- ಸವಿತಾ ದಂಪತಿ ಪುತ್ರಿ 6ರ ಹರೆಯದ ಚಾರುಲತಾ ವಾರದಿಂದಲೂ ಜ್ವರದಿಂದ ಬಳಲುತ್ತಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.
ಮಳೆಗಾಲದಲ್ಲಿ ಡೆಂಘಿ ತೀವ್ರತೆ ಹೆಚ್ಚಿದ್ದು, ಜನರು ಅತಿ ಎಚ್ಚರಿಕೆಯಿಂದ ಇರಬೇಕಿದೆ. ಹೂದಾನಿ, ಹಳೆ ಟೈರ್, ಖಾಲಿ ಡಬ್ಬ ಇತ್ಯಾದಿ ವಸ್ತುಗಳಲ್ಲಿ ನಿಂತ ನೀರಿನಲ್ಲಿ ಸೋಂಕಿಗೆ ಕಾರಣವಾದ ಈಡಿಸ್ ಸೊಳ್ಳೆ ಉತ್ಪತ್ತಿಯಾಗುವುದರಿಂದ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟು ಕೊಳ್ಳಬೇಕಿದೆ.
Kshetra Samachara
23/06/2022 12:30 pm