ಬೆಂಗಳೂರು: ಅನ್ಯ ರಾಜ್ಯಗಳಿಂದ ಬೆಂಗಳೂರಿಗೆ ಬರ್ತಿರುವವರಲ್ಲಿ ಅತಿಹೆಚ್ಚು ಸೋಂಕು ಪತ್ತೆ ಯಾಗಿದ್ದು, ವಿಪರ್ಯಾಸವೆಂದರೆ ಮಹದೇವಪುರದಲ್ಲಿ ನಿತ್ಯ ಕೊವೀಡ್ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ.
ಪ್ರತಿ ನಿತ್ಯ 25+ ಪ್ರಕರಣ ಮಹದೇವಪುರದಲ್ಲಿ ಬೆಳಕಿಗೆ ಬರ್ತಾಯಿದೆ. ಮುಂಬೈ, ದೆಹಲಿ, ಅಹಮದಾಬಾದ್ ನಿಂದ ಬಂದರವಲ್ಲಿ ಸೋಂಕು ಪತ್ತೆ ಯಾಗಿದೆ. ಮಹದೇವಪುರದಿಂದ ನಾಲ್ಕನೇ ಅಲೆ ಎಳುವ ಭೀತಿ ಎದುರಾಗಿದ್ದು, ಕ್ಲಸ್ಟರ್ ಗಳ ಬದಲು ವೈಯಕ್ತಿಕ ವಾಗಿ ಸೋಂಕು ಕಂಡು ಬರ್ತಿದೆ.
ಬೆಳ್ಳಂದೂರು, ವರ್ತೂರು, ಮಹ ದೇವಪುರ ವಾರ್ಡ್ ನಲ್ಲಿ ಕಾಡುಗೋಡಿ ಸೇರಿದಂತೆ ಈ ವಲಯದಲ್ಲಿ ನಿತ್ಯ 25 ಕೇಸ್ ಪತ್ತೆಯಾಗುತ್ತಿದೆ.
Kshetra Samachara
29/04/2022 09:21 am