ಬೆಂಗಳೂರು: ನಗರದ ಗೋವಿಂದರಾಜು ವಿಧಾನಸಭೆ ಕ್ಷೇತ್ರದ ಅಗ್ರಹಾರ ದಾಸರಹಳ್ಳಿಯಲ್ಲಿ ನಿರ್ಮಿಸಲಾಗುತ್ತಿರುವ 200 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 49 ಕೋಟಿ ಮೊತ್ತದ ಪ್ರಸ್ತಾವನೆ ಸಿದ್ಧಪಡಿಸಿದೆ.
ಬಿಬಿಎಂಪಿ 60 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಯ ಈ ಕಟ್ಟಡವನ್ನು ಮೂರು ಹಂತದಲ್ಲಿ ನಿರ್ಮಿಸಿದ್ದು, ಮುಕ್ತಾಯದ ಹಂತದಲ್ಲಿದೆ.
ಒಳಾಂಗಣ ಅಭಿವೃದ್ಧಿ, ಅಗ್ನಿಶಾಮಕ ವ್ಯವಸ್ಥೆ, ಮೊಡ್ಯುಲಾರ್ ಶಸ್ತ್ರ ಚಿಕಿತ್ಸಾ ಕೊಠಡಿ, ವೈದ್ಯಕೀಯ ಅನಿಲ ಕೊಳವೆ, ಸಿಸಿ ಕ್ಯಾಮೆರಾ, 30 ಬೆಡ್ ಗಳ ಐಸಿಯು ಹಾಗೂ ಸಂದೇಶ ಅಳವಡಿಕೆ ಕಾರ್ಯ ಆಗಬೇಕಿದೆ.
ಇನ್ನು, ಪೀಠೋಪಕರಣ, ವೈದ್ಯಕೀಯ ಉಪಕರಣ, ಆಂಬ್ಯುಲೆನ್ಸ್, ಚಿರಶಾಂತಿ ವಾಹನ ಖರೀದಿಸಬೇಕಾಗಿದೆ.104 ಹುದ್ದೆಗಳು ಆಸ್ಪತ್ರೆಯಲ್ಲಿ ಸೃಷ್ಟಿಯಾಗಿದೆ.
PublicNext
19/04/2022 10:57 pm