ಬೆಂಗಳೂರು: ದಿನೇ ದಿನೆ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ನಾನಾ ಆರೋಗ್ಯ ಸಮಸ್ಯೆಗಳು ಸಾಲುಸಾಲಾಗಿ ಕಾಡ್ತಿದೆ. ಅದರಲ್ಲೂ, ಕಿಡ್ನಿ ವೈಫಲ್ಯ ವಯಸ್ಸಿನ ಅಂತರವನ್ನೇ ದಾಟುತ್ತಿದೆ!
ಇತ್ತೀಚೆಗೆ ದೇಶದಲ್ಲಿ ಕಿಡ್ನಿ ವೈಫಲ್ಯ ಪ್ರಕರಣ ಹೆಚ್ಚಾಗುತ್ತಲೇ ಇದೆ. ವಾರ್ಷಿಕವಾಗಿ 2-3 ಲಕ್ಷ ಜನರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವುದನ್ನು ವರದಿ ಬಹಿರಂಗ ಪಡಿಸಿದೆ. ಮುಂದಿನ 5 ವರ್ಷಗಳಲ್ಲಿ 30ರ ವಯೋಮಾನದವರಲ್ಲೂ ದೀರ್ಘಾವಧಿ ಕಿಡ್ನಿ ಸಮಸ್ಯೆ (ಸಿ.ಕೆ.ಡಿ. -ಕ್ರೋನಿಕ್ ಕಿಡ್ನಿ ಡಿಸೀಸ್) ಪ್ರಮಾಣ ಶೇ. 5ರಷ್ಟು ಹೆಚ್ಚಳ ಸಾಧ್ಯತೆಯನ್ನು ವೈದ್ಯರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಸದ್ದಿಲ್ಲದೇ ಕೊಲ್ಲುವ ಮೂತ್ರಪಿಂಡ ರೋಗದ ಕುರಿತು ಎಚ್ಚರ ವಹಿಸುವುದು ಒಳಿತು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಡಯಾಲೀಸಿಸ್ ನಂತಹ ಶಿಕ್ಷೆಯನ್ನು ಜೀವನ ಪರ್ಯಂತ ಅನುಭವಿಸಬೇಕಾಗುತ್ತದೆ.
- ರಂಜಿತ ಎಂ. ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
11/03/2022 01:02 pm