ಬೆಂಗಳೂರು - ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬೂಸ್ಟರ್ ಡೋಸ್ ಪಡೆದುಕೊಂಡರು. ಬಳಿಕ ಮಾತನಾಡಿದ ರಾಜ್ಯಪಾಲರು, ದೇಶದೆಲ್ಲೆಡೆ ಬೂಸ್ಟರ್ ಡೋಸ್ ಲಸಿಕಾ ಅಭಿಯಾನ ನಡೆಯುತ್ತಿದೆ. ಇಂದು ನಾನು ಬೂಸ್ಟರ್ ಡೋಸ್ ಪಡೆದಿದ್ದೇನೆ.
ಇಂದು ಮಕರ ಸಂಕ್ರಮಣ ಹಬ್ಬದ ಹಿನ್ನೆಲೆ ರಾಜ್ಯದ ಜನತೆಗೆ ಸಂಕ್ರಾಂತಿ ಶುಭಾಶಯ ಕೋರಿದರು. ಈ ವೇಳೆ, ರಾಜ್ಯಪಾಲರಿಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸಾಥ್ ನೀಡಿದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈವರೆಗೂ 83,937 ಡೋಸ್ ಬೂಸ್ಟರ್ ಡೋಸ್ ನೀಡಲಾಗಿದೆ. 420 ಬಾಣಂತಿಯರಿಗೆ, ಗರ್ಭಿಣಿಯರು 1,179 ಮೂರನೇ ಡೋಸ್ ನೀಡಲಾಗಿದೆ. ಅರ್ಹರು ಎಲ್ಲರೂ 3ನೇ ಡೋಸ್ ಪಡೆಯಬೇಕು ಹಾಗೂ 15-18 ವರ್ಷದವರು ಲಸಿಕೆ ಪಡೆಯಬೇಕು. WHO ಕೂಡಾ ಲಸಿಕೆಯಿಂದ ಅಪಾಯ ಜಾಸ್ತಿ ಆಗಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಕೊರೊನಾದಿಂದ ರಕ್ಷಣೆ ಪಡೆಯಲು ಲಸಿಕೆ ಪಡೆಯಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದರು.
PublicNext
14/01/2022 05:16 pm