ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಾತಾವರಣದಲ್ಲಿ ಏರುಪೇರು: ಗಾರ್ಡನ್ ಸಿಟಿಯಲ್ಲಿ ವಿಷಮಶೀತ ಜ್ವರ ಭೀತಿ!

ವರದಿ: ಗಣೇಶ್ ಹೆಗಡೆ

ಬೆಂಗಳೂರು: ರಾಜಧಾನಿ ಬೆಂಗ ಳೂರಲ್ಲಿ ವಾತಾವರಣ ಹಲವು ಖಾಯಿಲೆಗಳಿಗೆ ದಾರಿ ಮಾಡಿ ಕೊಡುವಂತಿದೆ. ಕೋವಿಡ್ ಪ್ರಕರಣ ನಿತ್ಯ ಏರಿಕೆ ಕಾಣಿಸುತ್ತಿದ್ದು, ಜತೆಜತೆಗೆ ವಿಷಮ ಶೀತ ಜ್ವರ ಸಹಿತ ಮತ್ತಿತರ ಜ್ವರ ಸಂಬಂಧಿ ಖಾಯಿಲೆಗಳೂ ಅತಿಯಾಗುತ್ತಿದೆ.

ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ನೀಡುವ ದಾಖಲೆ ಪ್ರಕಾರ ಕಳೆದ ಒಂದು ವಾರದಲ್ಲಿ ಮೂವರು ಇನ್ ಪ್ಲೂಯೆನ್ಜ್ ಲೈಕ್ ಇಲ್ ನೆಸ್ ( ಐಎಲ್ ಐ) ರೋಗದಿಂದ ಮೃತ ಪಟ್ಟಿದ್ದಾರೆ.‌

ವಾರದಲ್ಲಿ ಬಿಬಿಎಂಪಿ ಆಸ್ಪತ್ರೆ 22,558 ಹಾಗೂ ಖಾಸಗಿ ಆಸ್ಪತ್ರೆ 2,211 ಮಂದಿಯನ್ನು ಬಿಬಿಎಂಪಿ ಪರೀಕ್ಷೆಗೆ ಒಳಪಡಿಸಿದೆ. ಇದರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 286 ಕೇಸ್ ಪಾಸಿಟಿವ್ ಮತ್ತು ಪ್ರೈವೇಟ್ ಹಾಸ್ಪಿಟಲ್ ನಲ್ಲಿ 846 ಪ್ರಕರಣಗಳು ಬೆಳಕಿಗೆ ಬಂದಿವೆ.

ಆತಂಕವೆಂದ್ರೆ, ವಿಷಮ ಶೀತ ಜ್ವರ ಹೆಚ್ಚಳವಾಗ್ತಿದ್ದರೂ ಸಿಲಿಕಾನ್ ಸಿಟಿಯ ಮಂದಿ ಕೋವಿಡ್ 2 ಡೋಸ್ ಪಡೆದು ಕೊಳ್ತಿಲ್ಲ. ಬರೋಬ್ಬರಿ 30 ಲಕ್ಷ ಮಂದಿ ಎರಡನೇ ಡೋಸ್ ಲಸಿಕೆ ಪಡೆದಿಲ್ಲ.

ಅಕ್ಟೋಬರ್ ನಲ್ಲಿ ಶೇ.30 ಮಾತ್ರ ಲಸಿಕೆ ಪಡೆದ ಜನರು, 25,87,988 ಮಂದಿ ಲಸಿಕೆ ಇನ್ನೂ ಪಡೆದಿಲ್ಲ. ಜನರ ನಿರಾಸಕ್ತಿ ವಿವಿಧ ಮಾದರಿಯ ಜ್ವರಕ್ಕೆ ರಹದಾರಿ ಮಾಡಿ ಕೊಡುತ್ತಿದೆ.

ಇನ್ನು, ಮಕ್ಕಳಲ್ಲಿ ನ್ಯೂಮೋನಿಯಾ ಕಾಯಿಲೆ ಹೆಚ್ಚಾಗಿ ಕಂಡು ಬರ್ತಿರುವ ಬಗ್ಗೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

12/11/2021 09:58 pm

Cinque Terre

992

Cinque Terre

0

ಸಂಬಂಧಿತ ಸುದ್ದಿ