ಕೋವಿಡ್ ಹಾವಳಿ ಶುರುವಾದಾಗಿನಿಂದಲೂ ಇಲ್ಲಿ ತನಕ ಜನ ಮಾಸ್ಕ್ ಹಾಕಿಕೊಂಡೇ ಜೀವನ ಸಾಗಿಸಿದ್ದಾರೆ. ಕೋವಿಡ್ ಕೇಸ್ ಸದ್ಯ ಕಮ್ಮಿಯಾದರೂ, ಮುಖದಿಂದ ಮಾಸ್ಕ್ ಮಾತ್ರ ಇಳಿದಿಲ್ಲ. ಆದರೆ, ಬಿರುಬೇಸಿಗೆ ಕಾರಣ ಮಾಸ್ಕ್ ನ ಸೈಡ್ ಎಫೆಕ್ಟ್ ಜನಾರೋಗ್ಯ, ಸೌಂದರ್ಯದ ಮೇಲೆ ತಟ್ಟಿದಂತೂ ಸುಳ್ಳಲ್ಲ.
ಚೀನಿ ವೈರಸ್ ಗೆ ಹೆದರಿ 2 ವರ್ಷ ಕಾಲ ಮಾಸ್ಕ್ ಹಿಂದೆ ಅಡಗಿತ್ತು ನಗರ ಜನರ ಮುಖ. ಈಗೀಗ ಈ ಮಾಸ್ಕ್ ಹೊಸ ಸಮಸ್ಯೆಯನ್ನೇ ಸೃಷ್ಟಿಸುತ್ತಿದೆ. ಬಿಸಿಲ ತಾಪಕ್ಕೆ ಮಾಸ್ಕ್ ಧಾರಣೆಯಿಂದಾಗಿ ಬೆವರಾಡದೆ ಮಾಸ್ಕ್ ಆಕ್ನೆ ಎಂಬ ಹೊಸ ಪ್ರಾಬ್ಲಂಗೆ ಸಿಟಿ ಜನ ತತ್ತರಿಸಿ ಹೋಗಿದ್ದಾರೆ.
ಮಾಸ್ಕ್ ಹಾಕಿದಾಗ ಉಸಿರಾಡಲು ಸುಲಭವಾಗಿ ಗಾಳಿ ದೊರಕುವುದಿಲ್ಲ. ಹೀಗಾಗಿ ಬೆವರು ಒಂದೇ ಕಡೆ ನಿಂತು, ಮಾಸ್ಕ್ ಜಾಗದಲ್ಲಿ ಮೊಡವೆ ಉಂಟಾಗುತ್ತದೆ. ಮಾಸ್ಕ್ ಬಿಗಿಯಾಗಿ ಹಾಕುವುದರಿಂದ ಮುಖದ ಮೇಲೆ ಚಿಕ್ಕ ಚಿಕ್ಕ ಮೊಡವೆಗಳ ಸಾಲೇ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಬಟ್ಟೆಯ ಮಾಸ್ಕ್ ಬಳಸುವಾಗ ಪ್ರತಿ ದಿನ ಒಗೆದು ಹಾಕಿಕೊಳ್ಳಬೇಕು. ಎನ್ 95 ಮಾಸ್ಕ್ ಹಾಕಿದರೆ ಮೂಗಿನ ಭಾಗದ ಬಳಿ ಸಿಲಿಕಾನ್ ಜೆಲ್ ಸ್ಟ್ರಿಪ್ ಉಪಯೋಗಿಸಲು ವೈದ್ಯರು ಸಲಹೆ ನೀಡಿದ್ದಾರೆ.
- ನವೀನ್, ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
08/04/2022 07:02 pm